ರಷ್ಯಾವು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಕ್ರೇನ್ ಸಹಾಯಕ್ಕಾಗಿ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾದ ಪ್ರಧಾನಿ ಮೋದಿಗೆ ಮನವಿ ಮಾಡಿದೆ.
ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ ಗೌರವಾನ್ವಿತ ನಾಯಕರಲ್ಲಿ ಒಬ್ಬರಾಗಿದ್ದಾರೆ. ನೀವು ರಷ್ಯಾದ ಜೊತೆಯಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದೀರಿ ಎಂದು ಭಾರತದ ಉಕ್ರೇನ್ ರಾಯಭಾರಿ ಪೊಲಿಖಾ ಹೇಳಿದ್ದಾರೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಭಾರತ ಸರ್ಕಾರದಿಂದ ಹೆಚ್ಚು ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪೊಲಿಖಾ ಮನವಿ ಮಾಡಿದರು.
ಇದು ಮುಂಜಾನೆ 5 ಗಂಟೆಯಿಂದ ಆರಂಭವಾದ ಅಸ್ಪಷ್ಟ ಆಕ್ರಮಣವಾಗಿದೆ. ಉಕ್ರೇನ್ನಲ್ಲಿ ಮಿಲಿಟರಿ ವಿಮಾನ ನಿಲ್ದಾಣಗಳು, ಮಿಲಿಟರಿ ಇನ್ಸ್ಟಾಲೇಷನ್ಗಳ ಮೇಲೆ ಬಾಂಬ್ ಹಾಗೂ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಪೊಲಿಖಾ ಮಾಹಿತಿ ನೀಡಿದರು.
ಕೆಲವು ದಾಳಿಗಳನ್ನು ರಾಜಧಾನಿಯ ಹೊರವಲಯದಲ್ಲಿ ನಡೆಸಲಾಗಿದೆ. ಕೆಲವು ದಾಳಿಗಳನ್ನು ಉಕ್ರೇನ್ನ ಗಡಿ ಪ್ರದೇಶದ ಒಳಗಡೆಯೇ ನಡೆದಿದೆ. ನಮ್ಮ ಸೈನಿಕರು ಹಾಗೂ ನಾಗರಿಕರ ಸಾವು – ನೋವುಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ಹೇಳಿದರು.