alex Certify ರಾಮನದಿ ಪುನಶ್ಚೇತನ ಮಿಷನ್ ಅಡಿ ನಿರ್ಮಾಣವಾಗಲಿದೆ ʼತಾವರೆʼ ಸರೋವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮನದಿ ಪುನಶ್ಚೇತನ ಮಿಷನ್ ಅಡಿ ನಿರ್ಮಾಣವಾಗಲಿದೆ ʼತಾವರೆʼ ಸರೋವರ

ಪುಣೆಯಲ್ಲಿನ ಅತಿದೊಡ್ಡ ನದಿ ಪುನಶ್ಚೇತನ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ರಾಮನದಿ ಪುನಶ್ಚೇತನ ಮಿಷನ್ (RRM) ಅಡಿಯಲ್ಲಿ, ನಗರದ ಮೊಟ್ಟ ಮೊದಲ ಕಮಲದ ಸರೋವರವನ್ನು ನಿರ್ಮಿಸಲಾಗುತ್ತಿದೆ. ತಾವರೆ ಸರೋವರವನ್ನು ನದಿಯ ಮೂಲದ ಬಳಿ, ಖಟ್ಪೇವಾಡಿ ಸರೋವರದಲ್ಲಿ ಸ್ಥಾಪಿಸುವುದಾಗಿ ಘೋಷಿಸಿದೆ.

ಪುಣೆ ನಗರದ ಮೊಟ್ಟಮೊದಲ ತಾವರೆ ಸರೋವರವನ್ನು ನಿರ್ಮಿಸಲು‌ ಹೆಚ್ಚಿನ ಮಹತ್ವ ನೀಡಲಾಗಿದೆ. ಬೀಜಗಳು, ಸಸಿಗಳು ಮತ್ತು ಕಮಲದ ಕೊಳವೆಗಳು ಸೇರಿದಂತೆ ಮೂರು ವಿಧಾನಗಳಲ್ಲಿ ಕಮಲ ತೋಟದ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ನಗರದ ಮೊದಲ ಕಮಲದ ಸರೋವರ ನಿರ್ಮಿಸುತ್ತಿರುವುದು ನಮ್ಮ ಕನಸು ನನಸಾದಂತಿದೆ. ಈ‌ ರಚನೆಯು ಕಮಲದ ಹೂವುಗಳು ಮತ್ತು ಸಸ್ಯಗಳ ಗುಣಗಳನ್ನು ಬಳಸಿಕೊಂಡು ನೀರಿನ ಅಗತ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಮಿಷನ್‌ನ ಸಂಘಟಕರು ತಿಳಿಸಿದ್ದಾರೆ.

ಮಿಷನ್ ಮುನ್ನಡೆಸುತ್ತಿರುವ ವಿದರ್ಭದ ಖಮ್‌ಗಾಂವ್‌ನ ಲಲಿತಕಲಾ ಶಿಕ್ಷಕ ಸಂಜಯ್ ಗುರವ್, ‌ನೀರಿನ ಆರೋಗ್ಯವನ್ನು ಹೆಚ್ಚಿಸಲು ನದಿಯ ಮೂಲದ ಕಮಲದ ಕೊಳಗಳು ಬಳಕೆಯಾಗುತ್ತವೆ. ಮುಂದಿನ ಆರರಿಂದ ಏಳು ತಿಂಗಳಲ್ಲಿ ಸರೋವರದಲ್ಲಿ ಕಮಲಗಳು ಅರಳುತ್ತವೆ‌ ಎಂದು ಹೇಳಿದ್ದಾರೆ.‌

ರಾಮನದಿ ಪುನಃಸ್ಥಾಪನೆ ಮಿಷನ್ (RRM) ಪುಣೆಯ ಅತಿದೊಡ್ಡ ನದಿ ಪುನಃಸ್ಥಾಪನೆ ಯೋಜನೆಗಳಲ್ಲಿ ಒಂದಾಗಿದೆ.‌ ಇದು ನಗರದ ಪಶ್ಚಿಮ ಅಂಚಿನಲ್ಲಿ ಹರಿಯುವ 19ಕಿಮೀ ಉದ್ದದ ರಾಮನದಿಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಸೃಷ್ಟಿಯಾಗಿದೆ. ಈ ಉಪಕ್ರಮದಲ್ಲಿ 38 ಕಾಲೇಜುಗಳು ಮತ್ತು 18 ಪರಿಸರ ಗುಂಪುಗಳಿಂದ ಸುಮಾರು 15,000 ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...