ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚುತ್ತಾ ಸಾಗಿದರೂ ಸಹ ಮತ್ತೊಂದೆಡೆ ಸಾಮಾಜಿಕ ಹೊಣೆಗಾರಿಕೆ ಎನ್ನುವುದು ದಿನೇ ದಿನೇ ಕಡಿಮೆಯೇ ಆಗುತ್ತಾ ಸಾಗಿರುವುದು ದುರದೃಷ್ಟಕರ. ಸಭೆ-ಸಮಾರಂಭಗಳಲ್ಲಿ ಊಟ ಮಾಡುವ ವೇಳೆ ಸಿಕ್ಕಿದ್ದೆಲ್ಲಾ ತಟ್ಟೆ/ಎಲೆಗೆ ಹಾಕಿಸಿಕೊಂಡು ಊಟವನ್ನು ವ್ಯರ್ಥ ಮಾಡುವ ಮಂದಿ ಎಲ್ಲೆಲ್ಲೂ ಇದ್ದಾರೆ.
ಹೀಗೆ ವ್ಯರ್ಥ ಮಾಡಲ್ಪಟ್ಟ ಆಹಾರ ಬಹುತೇಕ ಬಾರಿ ತ್ಯಾಜ್ಯದ ಜೊತೆ ಸೇರಿಕೊಂಡುಬಿಡುತ್ತದೆ. ಐಎಎಸ್ ಅಧಿಕಾರಿ ಅವನಿಶ್ ಶರಣ್ ಈ ಬಗ್ಗೆ ಹಂಚಿಕೊಂಡಿರುವ ಚಿತ್ರವೊಂದು ವೈರಲ್ ಆಗಿದೆ.
ಕೋವಿಡ್ 19 ಲಸಿಕೆಯಲ್ಲಿ ಮಹತ್ವದ ಸಾಧನೆ ಮಾಡಿದ ಭಾರತ: ಟ್ವೀಟ್ ಮೂಲಕ ಕೇಂದ್ರ ಆರೋಗ್ಯ ಸಚಿವರಿಂದ ಮಾಹಿತಿ
ಟ್ವಿಟರ್‌ನಲ್ಲಿ ಶೇರ್ ಮಾಡಲ್ಪಟ್ಟ ಈ ಪೋಸ್ಟ್‌ನಲ್ಲಿ, ಸಮಾರಂಭವೊಂದರಲ್ಲಿ ಬಳಸಿ ಬಿಟ್ಟ ತಟ್ಟೆಗಳನ್ನು ಶುದ್ಧಗೊಳಿಸುತ್ತಿರುವುದನ್ನು ನೋಡಬಹುದು. ಇದೇ ವೇಳೆ ಭಾರೀ ಪ್ರಮಾಣದ ಅನ್ನ ಮಣ್ಣುಪಾಲಾಗುತ್ತಿರುವ ದೃಶ್ಯ ಮನಕಲಕುವಂತಿದೆ.
“ನಿಮ್ಮ ಮದುವೆ ಛಾಯಾಗ್ರಾಹಕರು ಮಿಸ್ ಮಾಡಿಕೊಂಡ ಫೋಟೋ ಇದು. ಆಹಾರ ವ್ಯರ್ಥ ಮಾಡುವುದನ್ನು ಬಿಡಿ,” ಎಂದು ಕ್ಯಾಪ್ಷನ್ ಕೊಟ್ಟು ಈ ಚಿತ್ರ ಹಂಚಿಕೊಂಡಿದ್ದಾರೆ ಈ ಅಧಿಕಾರಿ.