ಕರ್ನಾಟಕದಲ್ಲಿ ಶುರುವಾದ ಹಿಜಾಬ್ ಕಿಚ್ಚು ಸಾಗರೋತ್ತರದಲ್ಲಿ ಸದ್ದು ಮಾಡುತ್ತಿದೆ. ಹಿಜಾಬ್ ವಿವಾದ ಬೆಳಕಿಗೆ ಬಂದಾಗಿನಿಂದ ಪಾಕಿಸ್ತಾನ ಈ ವಿಚಾರವಾಗಿ ಕೊಂಚ ಹೆಚ್ಚಾಗಿಯೇ ಪ್ರತಿಕ್ರಿಯೆ ನೀಡುತ್ತಿದೆ.
ಮೇಲೆ ಮೇಲೆ ಟ್ವೀಟ್ ಮಾಡುತ್ತಾ ಅಧಿಕೃತವಾಗಿ ಹೇಳಿಕೆ ನೀಡುತ್ತಿರುವ ಪಾಕಿಸ್ತಾನ, ಸೈಲೆಂಟಾಗಿ ಒಳಗೊಳಗೆ ಮತ್ತೊಂದು ಗೇಮ್ ಶುರು ಹಚ್ಚಿಕೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಅದ್ರಲ್ಲೂ ಸಾಮಾಜಿಕ ಜಾಲತಾಣವನ್ನು ಬಳಸಿ ಶತ್ರು ರಾಷ್ಟ್ರ, ಕರುನಾಡಿನ ಹಿಜಾಬ್ ವಿವಾದಕ್ಕೆ ತುಪ್ಪ ಸುರಿಯುತ್ತಿದೆ ಎಂದು ಹೇಳಲಾಗುತ್ತಿದೆ.
ಶ್ರೀರಾಮನ ಘೋಷಣೆ ಕೂಗುತ್ತಿದ್ದವರ ನಡುವೆ ಅಲ್ಲಾ ಹೋ ಅಕ್ಬರ್ ಎಂದು ಘೋಷಣೆ ಕೂಗಿದ ಮುಸ್ಕಾನ್ ಖಾನ್ ನಿಮಗೆಲ್ಲಾ ನೆನಪಿರಲೇಬೇಕು. ಘೋಷಣೆ ಕೂಗಿ ಮುಸ್ಲಿಂ ಸಮುದಾಯದ ಹಲವರ ಪಾಲಿಗೆ ದಿಟ್ಟ ಯುವತಿಯಾದ ಅದೇ ಮುಸ್ಕಾನ್ ಖಾನ್ ಹೆಸರಲ್ಲಿ ನೂರಾರು ಟ್ವಿಟ್ಟರ್ ಖಾತೆಗಳನ್ನ ತೆರೆಯಲಾಗಿದೆ.
ವಿಷಯ ಇಷ್ಟು ಸಿಂಪಲ್ ಅಲ್ಲಾ, ಈ ಮುಸ್ಕಾನ್ ಹೆಸರಲ್ಲಿ ಭಾರತದಲ್ಲೆಲ್ಲೊ ಖಾತೆ ತೆರೆದಿಲ್ಲ. ಈ ಖಾತೆಗಳ ಜಿಯೋ ಲೋಕೆಷನ್ ಪಾಕಿಸ್ತಾನದ್ದು ಎಂದು ವರದಿಯಾಗಿದೆ.
ಈ ಫೇಕ್ ಖಾತೆಗಳಲ್ಲಿ ಒಂದಕ್ಕೆ ಐದು ಸಾವಿರಕ್ಕಿಂತ ಹೆಚ್ಚು ಅನುಯಾಯಿಗಳಿದ್ದು, ಮೊದಲು ಈ ಖಾತೆಯ ಜಿಯೋಗ್ರಾಫಿಕಲ್ ಲೋಕೇಷನ್ ಪಾಕಿಸ್ತಾನವಾಗಿತ್ತು.
ಆದರೆ ಇತ್ತೀಚೆಗೆ ಇದರ ಜಿಯೋ ಲೋಕೇಷನ್ ಅನ್ನು ಕರ್ನಾಟಕ ಎಂದು ಬದಲಾಯಿಸಲಾಗಿದೆ. ಅಷ್ಟೇ ಅಲ್ಲಾ ಈ ಫೇಕ್ ಖಾತೆಗಳಲ್ಲಿ ಒಂದು ಫೆಬ್ರವರಿ 11 ರಂದು ಹಿಜಾಬ್ ವಿಚಾರದಲ್ಲಿ ಸಹಾಯ ಮಾಡುತ್ತಿರುವುದಕ್ಕೆ ತಾಲಿಬಾನ್ ಗೆ ಧನ್ಯವಾದ ಎಂದು ಟ್ವೀಟ್ ಮಾಡಿದೆ.
ಈ ಖಾತೆಗಳು ಹಿಜಾಬ್ ವಿಚಾರದ ಪ್ರಸಿದ್ಧ ಹ್ಯಾಶ್ ಟ್ಯಾಗ್ ಗಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಅತಿಹೆಚ್ಚು ಟ್ವೀಟ್ ಗಳು ಪಾಕಿಸ್ತಾನದಿಂದ ಬರುತ್ತಿವೆ ಎಂಬುದು ಗಮನಾರ್ಹ.
ಬ್ರೇಕಿಂಗ್ ನ್ಯೂಸ್: NEET MDS 2022 ಪರೀಕ್ಷೆ ದಿನಾಂಕ ಮುಂದೂಡಿದ ಕೇಂದ್ರ; ಇಂಟರ್ನ್ಶಿಪ್ ಸಲ್ಲಿಕೆ ಅವಧಿಯೂ ವಿಸ್ತರಣೆ
ಪಾಕಿಸ್ತಾನದ ಸರ್ಕಾರಿ ರೆಡಿಯೋ ಇತ್ತೀಚಿಗೆ ಆತಂಕಕಾರಿ ಸುದ್ದಿಯನ್ನ ಪ್ರಸಾರ ಮಾಡಿದೆ. ಅದರ ಪ್ರಕಾರ ಪ್ರೋ ಖಲಿಸ್ತಾನಿ ಗುಂಪು ಸಿಖ್ಸ್ ಫಾರ್ ಜಸ್ಟೀಸ್, ಹಿಜಾಬ್ ವಿಚಾರವಾಗಿ ಚಳುವಳಿ ನಡೆಸಿ ಎಂದು ಭಾರತದ ಮುಸ್ಲಿಮರಿಗೆ ಕರೆ ನೀಡಿದ್ದಾರೆಂದು ತಿಳಿಸಿದೆ. ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಗುರುಪತ್ವಂತ್ ಪನ್ನು ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಭಾರತದ ಮುಸ್ಲಿಮರಿಗೆ ಪ್ರತ್ಯೇಕ ದೇಶದ ಬೇಡಿಕೆ ಇಟ್ಟಿದ್ದಾನೆ.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪುತ್ರಿ ಮರಿಯಮ್, ಹಿಜಾಬ್ ವಿವಾದದ ನಂತರ ತನ್ನ ಟ್ವಿಟ್ಟರ್ ಡಿಪಿಯನ್ನು ಬದಲಾಯಿಸಿದ್ದು. ಮುಸ್ಕಾನ್ ಖಾನ್ ನಂತೆ ಕಾಣುವ ಫೋಟೊ ಅಪ್ಲೋಡ್ ಮಾಡಿದ್ದಾರೆ. ಪಾಕಿಸ್ತಾನ ಹಿಜಾಬ್ ವಿಚಾರದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದು, ಭಾರತದಲ್ಲಿ ಆಂತರಿಕ ಅಶಾಂತಿ ತರಲು ತುದಿಗಾಲಿನಲ್ಲಿ ನಿಂತಿದೆ. ಅಲ್ಲದೇ ಈ ವಿಚಾರದಲ್ಲಿ ಡಿಜಿಟಲ್ ಸ್ಪೇಸ್ ಬಳಸಿಕೊಂಡು ಈಗಾಗಲೇ ಸಾಕಷ್ಟು ಡ್ಯಾಮೇಜ್ ಮಾಡಿದೆ ಎಂದು ಇಂಟಲಿಜೆನ್ಸ್ ಮೂಲಗಳಿಂದ ತಿಳಿದು ಬಂದಿದೆ.