ನೂರಾರು ಕುಟುಂಬಗಳಿಗೆ ಆಹಾರವನ್ನು ನೀಡಬಹುದಾದ ಫಾರ್ಮ್ ಅನ್ನು ಖರೀದಿಸಿದ ನಂತರ ಯುಕೆ ಸ್ನೇಹಿತರ ಗುಂಪು ಪ್ರಶಂಸೆ ಗಳಿಸಿದೆ.
ಲಾಕ್ಡೌನ್ ಸಮಯದಲ್ಲಿ ಮಿಡಲ್ ಗ್ರೌಂಡ್ ಗ್ರೋವರ್ಸ್ ಲಾಕ್ಡೌನ್ ಸಮಯದಲ್ಲಿ ವೆಜ್ ಬಾಕ್ಸ್ ಉದ್ಯಮವನ್ನ ಆರಂಭಿಸಿದರು. ಇವರು ಬ್ರಿಟನ್ನಲ್ಲಿ ಲಾಕ್ಡೌನ್ ಸಮಯದಲ್ಲಿ ಸ್ಥಳೀಯರಿಗೆ 65 ಆರ್ಗಾನಿಕ್ ವೆಜ್ ಬಾಕ್ಸ್ಗಳನ್ನು ಒದಗಿಸಿದರು.
16 ಎಕರೆ ಜಾಗವನ್ನು ಖರೀದಿಸಲು ಅವರು ದೇಣಿಗೆ ಸಂಗ್ರಹದ ಮೂಲಕ 1 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದರು. ಈ ಮೂಲಕ 600 ಕುಟುಂಬಗಳಿಗೆ ಆಹಾರವನ್ನು ಪೂರೈಸಿದ್ದಾರೆ.
ಹ್ಯಾಮೋಷ್ ಇವಾನ್ಸ್ ಕ್ಸೇವಿಯರ್ ಹ್ಯಾಮೋನ್, ಲಿವಿ ರೋಡ್ಸ್ ಹಾಗೂ ಸ್ಯಾಮಿ ಎಲ್ಮೋರ್ ಈ ವೆಜ್ ಬಾಕ್ಸ್ ಉದ್ಯಮವನ್ನು ಆರಂಭಿಸಿದರು. 2020ರಲ್ಲಿ ಬಾಡಿಗೆ ಪಡೆದ ಜಾಗದಲ್ಲಿ ಅವರು ತರಕಾರಿಗಳನ್ನು ಬೆಳೆಯಲು ಆರಂಭಿಸಿದರು. ಆದರೆ ದೇಣಿಗೆ ಹಣ ಸಂಗ್ರಹವಾದ ಬಳಿಕ ಇದೀಗ ತೋಟಗಳ ತುಂಬೆಲ್ಲ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.