ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹರಿ ಅವರು ಬುಧವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು 69ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ಸಂಗೀತ ಲೋಕ ಎಂದೂ ಮರೆಯದ ಮಾಣಿಕ್ಯ ಲತಾ ಮಂಗೇಶ್ಕರ್ ನಿಧನದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಸಂಗೀತಗಾರ ಸಾವನ್ನಪ್ಪಿರುವುದು ಸಂಗೀತ ಲೋಕಕ್ಕೆ ನಷ್ಟವಾಗಿದೆ. ಈ ದುಃಖದ ಸುದ್ದಿ ಹೊರಬಿದ್ದ ಕೂಡಲೇ, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಕೋಟ್ಯಾಂತರ ಜನ ಸಂತಾಪ ಸೂಚಿಸಿದ್ದಾರೆ.
ಕೊರೋನಾ ಭಾರಿ ಇಳಿಕೆ ಹಿನ್ನಲೆ, ಕೇಂದ್ರದಿಂದ ಮಹತ್ವದ ಸೂಚನೆ; ಕೋವಿಡ್ ನಿರ್ಬಂಧ ತೆರವುಗೊಳಿಸಲು ರಾಜ್ಯಗಳಿಗೆ ಪತ್ರ.
ಇವರೆಲ್ಲರ ನಡುವೆ ಬಪ್ಪಿ ಲಹರಿಯವರಿಗೆ ಮ್ಯೂಸಿಕಲ್ ಟ್ರಿಬ್ಯೂಟ್ ಮೂಲಕ ಅಂತಿಮ ನಮನ ಸೂಚಿಸಿರುವ ITBP ಕಾನ್ಸ್‌ಟೇಬಲ್ ಎಲ್ಲರ ಗಮನ ಸೆಳೆದಿದ್ದಾರೆ. ಬಪ್ಪಿ ಅವರ ಪ್ರಸಿದ್ಧ ಗೀತೆಯೊಂದನ್ನು ಹಾಡುವ ಮೂಲಕ ತಮ್ಮದೇ ಆದ ಸಂಗೀತಮಯ ರೀತಿಯಲ್ಲಿ ಕಾನ್‌ಸ್ಟೇಬಲ್ ಸೋವನ್ ಬ್ಯಾನರ್ಜಿ ಅವರು, ಬಪ್ಪಿ ಲಹರಿಗೆ ಗೌರವ ಸಲ್ಲಿಸಿದ್ದಾರೆ.
ವಿಡಿಯೊದಲ್ಲಿ, ಕಾನ್‌ಸ್ಟೇಬಲ್ ಸೋವನ್ ಬ್ಯಾನರ್ಜಿ ಅವರು 1987 ರಲ್ಲಿ ತೆರೆಕಂಡ ಸತ್ಯಮೇವ ಜಯತೆ ಚಿತ್ರದ ‘ದಿಲ್ ಮೇ ಹೋ ತುಮ್’ ಎನ್ನುವ ಹಿಂದಿ ಹಾಡನ್ನು ಹಾಡುತ್ತ, ಮಧ್ಯದಲ್ಲಿ ಅದೇ ಹಾಡಿನ ಬಂಗಾಳಿ ಆವೃತ್ತಿಯನ್ನು ಹಾಡಿದ್ದಾರೆ.
ಈ ಎರಡು ಹಾಡುಗಳಿಗೆ ಬಪ್ಪಿ ಲಹರಿ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದು ಎಂಬುದು ಗಮನಾರ್ಹ. ಸಧ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಸೋವನ್ ಬ್ಯಾನರ್ಜಿ ಅವರು ಬಪ್ಪಿ ದಾ ಅವರಿಗೆ ಗೌರವ ಸಲ್ಲಿಸಿದ ರೀತಿಗೆ ಸೋಷಿಯಲ್ ಮೀಡಿಯಾ ಯೂಸರ್ಸ್ ಮೂಕವಿಸ್ಮಿತರಾಗಿದ್ದಾರೆ.