ಐಪಿಎಲ್ ಮೆಗಾ ಹರಾಜು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿ ಹರಾಜಿನಲ್ಲಿ 10 ತಂಡಗಳು, 590 ಆಟಗಾರರನ್ನು ಖರೀದಿ ಮಾಡಲಿದ್ದಾರೆ. ಆರಂಭದಲ್ಲಿಯೇ ಶಿಖರ್ ಧವನ್ ಗೆ ಲಾಟರಿ ಹೊಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಶಿಖರ್ ಧವನ್ ಅವರನ್ನು ಬಿಡ್ ಮಾಡಿತು. ನಂತರ ರಾಜಸ್ಥಾನ್ ರಾಯಲ್ಸ್ ಬಿಡ್ ಮಾಡ್ತು. ಶಿಖರ್ ಧವನ್ಗಾಗಿ ದೆಹಲಿ ಮತ್ತು ರಾಜಸ್ಥಾನ ನಡುವೆ ಸುದೀರ್ಘ ಪೈಪೋಟಿ ಏರ್ಪಟ್ಟಿತ್ತು. ಕೊನೆಯಲ್ಲಿ ಪಂಜಾಬ್ ಕಿಂಗ್ಸ್ ಶಿಖರ್ ಧವನ್ ಅವರನ್ನು 8.25 ಕೋಟಿ ರೂಪಾಯಿಗೆ ಖರೀದಿಸಿದೆ. ಮಯಾಂಕ್ ಅಗರ್ವಾಲ್ ಗೆ ಜೋಡಿ ಸಿಕ್ಕಂತಾಗಿದೆ.
ಇನ್ನು ಭಾರತದ ಬಲಿಷ್ಠ ಟಿ20 ಬ್ಯಾಟ್ಸ್ ಮನ್ ಹಾಗೂ ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ ಸುರೇಶ್ ರೈನಾಗೆ ನಿರಾಸೆಯಾಗಿದೆ. ಸುರೇಶ್ ರೈನಾ ಐಪಿಎಲ್ 2022 ರ ಮೆಗಾ ಹರಾಜಿನ ಮೊದಲ ಸುತ್ತಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಯಾವುದೇ ತಂಡ ಅವರನ್ನು ಬಿಡ್ ಮಾಡಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸುರೇಶ್ ರೈನಾ ಬಿಡ್ ಗೆ ಮುಂದಾಗಲಿಲ್ಲ.
ಸುರೇಶ್ ರೈನಾ ಹೊರತುಪಡಿಸಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಕೂಡ ಮಾರಾಟವಾಗದೆ ಉಳಿದಿದ್ದಾರೆ. ಡ್ವೇನ್ ಬ್ರಾವೋ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ನೊಂದಿಗೆ ಸೇರಿಕೊಂಡಿದ್ದಾರೆ. ಅವರನ್ನು ಚೆನ್ನೈ 4.25 ಕೋಟಿ ರೂಪಾಯಿಗೆ ಖರೀದಿಸಿದೆ.