ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಗಿದ್ದರಿಂದ ಮನನೊಂದಿದ್ದ ವ್ಯಾಪಾರಿಯೊಬ್ಬರು ಫೇಸ್ಬುಕ್ ಲೈವ್ನಲ್ಲಿ ವಿಷಸೇವನೆ ಮಾಡಿದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶ ಚುನಾವಣೆಗೆ ಒಂದೇ ದಿನ ಮುಂಚೆ ಬಾಗಪತ್ನಲ್ಲಿ ಶೂ ವ್ಯಾಪಾರಿ ರಾಜೀವ್ ತೋಮರ್ ತಮ್ಮ ಪತ್ನಿಯ ಜೊತೆಯಲ್ಲಿ ವಿಷ ಸೇವನೆ ಮಾಡಿದ್ದಾರೆ. ಆದರೆ ರಾಜೀವ್ ತೋಮರ್ ಪ್ರಾಣಾಪಾಯದಿಂದ ಪಾರಾಗಿದ್ದರೆ ಅವರ ಪತ್ನಿ ನಿಧನರಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ 40 ವರ್ಷದ ರಾಜೀವ್ ತೋಮರ್ ಅವರ ಪತ್ನಿ ತಡೆಯಲು ಯತ್ನಿಸುತ್ತಿರುವ ನಡುವೆಯೇ ಸ್ಯಾಚೆಟ್ನ ಒಳಗಿದ್ದ ಪದಾರ್ಥವನ್ನು ನುಂಗಿದ್ದಾರೆ. ತೋಮರ್ ಪತ್ನಿಯು ಅದನ್ನು ಉಗುಳುವಂತೆ ಪತಿಗೆ ಒತ್ತಾಯಿಸಿದ್ದಾರೆ. ಆದರೆ ಇದು ಸಾಧ್ಯವಾಗದೇ ಇದ್ದಾಗ ಪತ್ನಿ ಕೂಡ ವಿಷ ಸೇವನೆ ಮಾಡಿದ್ದಾರೆ.
ನನಗೆ ತಿಳಿದ ಪ್ರಕಾರ ನನಗೆ ಮಾತನಾಡುವ ಹಕ್ಕಿದೆ. ನನ್ನ ಮೇಲಿರುವ ಸಾಲಗಳನ್ನು ತೀರಿಸುತ್ತೇನೆ. ನಾನು ಸತ್ತರೂ ಕೂಡ ಸಾಲಗಳು ಪಾವತಿಯಾಗುತ್ತದೆ. ಆದರೆ ಎಲ್ಲರ ಬಳಿ ನಾನು ಮನವಿ ಮಾಡುವುದು ಇಷ್ಟೇ. ದಯವಿಟ್ಟು ಈ ವಿಡಿಯೋವನ್ನು ಆದಷ್ಟು ಶೇರ್ ಮಾಡಿ. ನಾನು ರಾಷ್ಟ್ರವಿರೋಧಿ ಅಲ್ಲ. ನನಗೆ ಈ ದೇಶದ ಮೇಲೆ ನಂಬಿಕೆ ಇದೆ. ಆದರೆ ಪ್ರಧಾನಿ ಮೋದಿ ಈ ದೇಶದ ಸಣ್ಣ ವ್ಯಾಪಾರಿಗಳ ಪರವಾಗಿಲ್ಲ. ನಿಮ್ಮ ಪಾಲಿಸಿಗಳನ್ನು ಬದಲಾಯಿಸಿಕೊಳ್ಳಿ ಎಂದು ಕಣ್ಣೀರಿಡುತ್ತಾ ತೋಮರ್ ಹೇಳಿದ್ದಾರೆ.