ಎಲ್ಲಾದರೂ ಬೆಂಕಿ ಕಾಣಿಸಿಕೊಂಡರೆ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳ್ಕಕೆ ಹಾಜರಾಗಿ ಬೆಂಕಿ ನಂದಿಸುತ್ತಾರೆ. ಇದಕ್ಕಾಗಿ ಅವರು ಯಾವ ಸಾಹಸಕ್ಕೂ ಸಿದ್ಧರಿರುತ್ತಾರೆ.
ಇದೀಗ ಗ್ನಿಶಾಮಕ ದಳದ ಸಿಬ್ಬಂದಿಯ ತೀವ್ರ ಮತ್ತು ಚಮತ್ಕಾರಿಕ ತರಬೇತಿಯ ವಿಡಿಯೋ ವೈರಲ್ ಆಗಿದ್ದು, ಇವರನ್ನು ನೆಟ್ಟಿಗರು ಸ್ಪೈಡರ್ ಮ್ಯಾನ್‌ಗೆ ಹೋಲಿಸಿದ್ದಾರೆ.
ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯು ಎತ್ತರದ ಕಟ್ಟಡದ ಮೇಲೆ ಹಾರುವ ಮೊದಲು ಏಣಿಯೊಂದಿಗೆ ಓಡುತ್ತಿರುವುದನ್ನು ತೋರಿಸುತ್ತದೆ. ವೇಗವಾಗಿ ಓಡುತ್ತಾ ಕೈಯಲ್ಲಿ ಹಿಡಿದುಕೊಂಡಿದ್ದ ಏಣಿಯನ್ನು ಮೇಲಕ್ಕೇರಿಸುತ್ತಾ ಕೆಲವೇ ಸೆಕೆಂಡುಗಳಲ್ಲಿ ಕಟ್ಟಡವನ್ನು ಏರಿದ್ದಾನೆ. ಈ ವಿಡಿಯೋ ನೋಡುಗರನ್ನು ಮಂತ್ರಮುಗ್ಧಗೊಳಿಸಿದೆ.
ವರದಿಗಳ ಪ್ರಕಾರ, ಬಲ್ಗೇರಿಯಾದ ಅಗ್ನಿಶಾಮಕ ಸಿಬ್ಬಂದಿ, ರಾಷ್ಟ್ರೀಯ ದಾಖಲೆ ಹೊಂದಿರುವ ಜಾರ್ಜ್ ಎಂದು ಗುರುತಿಸಲಾಗಿದೆ. ಆತನ ಭಾರಿ ವೇಗ ಮತ್ತು ಅವನ ತೋಳುಗಳ ಬಲವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ 50 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಈತನ ವೇಗಕ್ಕೆ ನೆಟ್ಟಿಗರು ಮನಸೋತಿದ್ದಾರೆ.