ಬೆಂಗಳೂರು: ವಾರಾಂತ್ಯದಲ್ಲಿಯೂ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ವಾರದ 5 ದಿನಗಳ ಕಾಲ ಕಾರ್ಯ ನಿರ್ವಹಣೆ ಆದೇಶ ಹಿಂಪಡೆಯಲಾಗಿದೆ.
ಸರ್ಕಾರಿ ಕಚೇರಿಗಳು ವಾರಾಂತ್ಯದಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದ್ದು, 5 ದಿನಗಳ ಕಾಲ ಕಾರ್ಯ ನಿರ್ವಹಿಸಬೇಕು ಎಂಬ ಹಿಂದಿನ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.
ಕೊರೋನಾ ತೀವ್ರ ಏರಿಕೆ ಹಿನ್ನಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದರಿಂದ 5 ದಿನ ಮಾತ್ರ ಕಚೇರಿ ನಿರ್ವಹಣೆಗೆ ಆದೇಶ ನೀಡಲಾಗಿತ್ತು. ಹಿಂದಿನ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿದೆ.