alex Certify ಪ್ರೇಮಿಗಳನ್ನು ಗ್ರಾಪಂ ಕಚೇರಿಯಲ್ಲಿಯೇ ಮದುವೆ ಮಾಡಿಸಿದ ಪಿಡಿಒ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಮಿಗಳನ್ನು ಗ್ರಾಪಂ ಕಚೇರಿಯಲ್ಲಿಯೇ ಮದುವೆ ಮಾಡಿಸಿದ ಪಿಡಿಒ

ಮೈಸೂರು : ಗ್ರಾಪಂನ ವಾರ್ಡ್ ಸಭೆಯಲ್ಲಿ ವಿರೋಧದ ಮಧ್ಯೆಯೇ ಪಿಡಿಒ ಅವರು ತಮ್ಮ ನೇತೃತ್ವದಲ್ಲಿ ಪ್ರೇಮಿಗಳ ವಿವಾಹ ನೆರವೇರಿಸಿದ್ದಾರೆ.
ಈ ಘಟನೆ ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಪಂನಲ್ಲಿ ನಡೆದಿದೆ. ಗ್ರಾಮದ ಯುವಕ ಹಾಗೂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಎರಡೂ ಕುಟುಂಬಗಳಿಂದ ವಿರೋಧ ವ್ಯಕ್ತವಾಗಿತ್ತು.

ಬಸವರಾಜು(24) ಹಾಗೂ ಸುಚಿತ್ರಾ(19) ಪರಸ್ಪರ ಪ್ರೀತಿಸಿದ್ದರು. ಇವರ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸೂಚಿಸದಾಗ ಈ ಪ್ರೇಮಿಗಳು ಗ್ರಾಪಂ ಸಭೆಯಲ್ಲಿ ಮದುವೆ ಮಾಡುವಂತೆ ಮನವಿ ಮಾಡಿದ್ದಾರೆ.

ಇಂದು ಗ್ರಾಮದಲ್ಲಿ ಗ್ರಾಪಂನ ವಾರ್ಡ್ ಸಭೆ ನಡೆದಾಗ ಈ ವಿಚಾರವಾಗಿ ಗದ್ದಲ ಆರಂಭವಾಗಿತ್ತು. ಪ್ರೇಮಿಗಳು ಮಾತ್ರ ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟು ಇರಲು ಒಪ್ಪಲಿಲ್ಲ. ಹೀಗಾಗಿ ಗ್ರಾಪಂನ ಪಿಡಿಒ ಮದ್ಯಸ್ಥಿಕೆ ವಹಿಸಿ ಎರಡೂ ಕುಟುಂಬಗಳಿಗೆ ಬುದ್ಧಿ ಹೇಳಿ ತಮ್ಮ ನೇತೃತ್ವದಲ್ಲಿಯೇ ಮದುವೆ ಮಾಡಿಸಿದ್ದಾರೆ.
ಪಿಡಿಒ ಅವರ ನಿರ್ಧಾರಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...