ಬೆಂಗಳೂರು: ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ಬೆಳಕಿಗೆ ಬಂದಿದೆ.
30 ವರ್ಷದ ನುಮ್ರಾ ಸಿಮೀನ್ ಮೃತ ಮಹಿಳೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನುಮ್ರಾ ಶವ ಪತ್ತೆಯಾಗಿದೆ.
ಪತಿ ಶಹಬಾಜ್ ಖಾನ್ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಆಕೆಯ ಪತಿ ಹಾಗೂ ಮನೆಯವರೇ ಕಾರಣ ಎಂದು ನುಮ್ರಾ ಸಮೀನ್ ಪೋಷಕರು ಆರೋಪಿಸಿದ್ದಾರೆ.