ಬೇಬಿ ಶಾರ್ಕ್….ಡು……ಡು ಎಂದು ಗುನುಗಿದರೆ ಸಾಕು, ನಿಮ್ಮ ಬಳಿಗೆ ಓಡಿಬರುವ ಅಥವಾ ನಿಂತಲ್ಲೇ ನಗುತ್ತಾ ಕುಪ್ಪಳಿಸುವ ಮಗುವೇ ಇಲ್ಲ ಎನಿಸುತ್ತದೆ.
ಅಷ್ಟರಮಟ್ಟಿಗೆ ಸಣ್ಣಮಕ್ಕಳ ಮನಸ್ಸಿನಲ್ಲಿ ಈ ಹಾಡು ಜನಪ್ರಿಯವಾಗಿ ನೆಲೆಸಿದೆ. ಕೊರಿಯಾದ ಬ್ಯಾಂಡ್ ಫಿಂಕ್‌ಫಾಂಗ್, ಮಕ್ಕಳ ಸರಣಿಯಾಗಿ 2016ರಲ್ಲಿ ಬಿಡುಗಡೆ ಮಾಡಿದ ಡಾನ್ಸ್‌ಗೆ ಉತ್ತೇಜಿಸುವ ಹಾಡು ಇದು.
ಇದುವರೆಗೂ ಸುಮಾರು 1000 ಕೋಟಿ ಜನರು ಯೂಟ್ಯೂಬ್‌ನಲ್ಲಿ ಈ ಹಾಡನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಷ್ಟೊಂದು ಮೆಚ್ಚುಗೆ ಪಡೆದಿರುವ ಮೊದಲ ಹಾಡು ಎಂಬ ಹೊಸ ಗಿನ್ನೆಸ್ ದಾಖಲೆಯನ್ನು ಇದು ನಿರ್ಮಿಸಿದೆ. ವಿಶ್ವದ ಜನಸಂಖ್ಯೆ 780 ಕೋಟಿಗೂ ಹೆಚ್ಚು ಜನರು ತಮ್ಮ ಹಾಡನ್ನು ಯೂಟ್ಯೂಬ್‌ನಲ್ಲಿ ಪುನಃ ಪುನಃ ಕೇಳಿರುವುದಕ್ಕೆ ಪಿಂಕ್‌ಫಾಂಗ್ ಬ್ಯಾಂಡ್ ಬಹಳ ಸಂತಸ ವ್ಯಕ್ತಪಡಿಸಿದೆ.
ಮಕ್ಕಳು ಆರಾಮಾಗಿ ಮನಸ್ಸಿನಲ್ಲಿ ಗುನುಗುತ್ತಲೇ ಹೆಜ್ಜೆ ಹಾಕುವ ರೀತಿಯಲ್ಲಿ ಈ ಹಾಡಿನ ಸಾಹಿತ್ಯ ರಚಿಸಲಾಗಿದೆ. 1-5 ವರ್ಷದ ಮಕ್ಕಳು ಕೂಡ ಡು….ಡು…..ಡು…..ಡು….. ಎನ್ನುತ್ತಾ ಕುಣಿಯುವುದನ್ನು ನಿಮ್ಮ ಸುತ್ತಲೂ ಗಮನಿಸಿರುತ್ತೀರಿ.
ಕಳೆದ 15 ತಿಂಗಳಿಂದ ಸತತವಾಗಿ ಜನರು ಯೂಟ್ಯೂಬ್‌ನಲ್ಲಿ ಈ ಹಾಡಿಗಾಗಿ ಹುಡುಕಾಟ ನಡೆಸಿ, ಬಳಿಕ ಆಯ್ಕೆ ಮಾಡಿಕೊಂಡು ಕೇಳುತ್ತಿದ್ದಾರಂತೆ.
ಇದಕ್ಕೂ ಮುನ್ನ ಡ್ಯಾಡಿ ಆಂಕಿಯ ಡೆಸ್ಪಾಕಿಟೊ ಅತ್ಯಂತ ಪ್ರಸಿದ್ಧ ಹಾಡು ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. 77 ಕೋಟಿ ಜನರು ಯೂಟ್ಯೂಬ್‌ನಲ್ಲಿ ಈ ವಿಡಿಯೊ ನೋಡಿ, ಮೆಚ್ಚುಗೆ ಸೂಚಿಸಿದ್ದರು.