ಕೋವಿಡ್ ಕಾರಣದಿಂದಾಗಿ ಅದೆಷ್ಟೋ ಮಂದಿಯ ವಿವಾಹ ಮುಂದೂಡಲ್ಪಟ್ಟಿದೆ. ಇನ್ನು ಕೆಲವರ ಮದುವೆಯಂತೂ ರದ್ದಾಗಿದ್ದೂ ಇದೆ. ಆದರೆ ಇಲ್ಲೊಬ್ಬ ಯುವತಿಯು ತನ್ನ ಮದುವೆಗೆ ಕೋವಿಡ್ನಿಂದಾಗಿ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು ಮಾಡಿದ ಪ್ಲಾನ್ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!
ತನಗೆ ಕೋವಿಡ್ ಸೋಂಕು ಬಂದರೆ ಮದುವೆ ಮುಂದೂಡಲ್ಪಡುತ್ತದೆ ಎಂಬ ಕಾರಣಕ್ಕೆ ಈಕೆ ಮದುವೆಗೂ ಮುನ್ನವೇ ಕೋವಿಡ್ ಸೋಂಕನ್ನು ಬರಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದಾಳೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿವಾಸಿಯಾದ ಮಹಿಳೆಯು ಕೋವಿಡ್ ಸೋಂಕು ಬರಿಸಿಕೊಳ್ಳುವ ಸಲುವಾಗಿ ನೈಟ್ ಕ್ಲಬ್ನಲ್ಲಿ ತಾನು ಮಾಡಿದ ಹುಚ್ಚಾಟಗಳನ್ನು ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಮದುವೆಗೆ ಆರು ವಾರಗಳ ಮುನ್ನವೇ ಹೇಗಾದರೂ ಮಾಡಿ ಕೋವಿಡ್ ಸೋಂಕು ತಗುಲಿದರೆ ಮದುವೆ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾಗೋದಿಲ್ಲ ಅಂತಾ ನೈಟ್ ಕ್ಲಬ್ಗೆ ತೆರಳಿ ಅಪರಿಚಿತರನ್ನು ಆಲಂಗಿಸಿದ್ದಾಳೆ. ಅಲ್ಲದೇ ಯಾರೋ ಕುಡಿದ ಪಾನೀಯಗಳನ್ನು ಸೇವಿಸಿದ್ದಾಳೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಯರ್ರಾಬಿರ್ರಿ ವೈರಲ್ ಆಗಿದೆ. ಕೆಲವರು ವಧುವಿನ ಪ್ಲಾನ್ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರೆ, ಇನ್ನು ಹಲವರು ಕೋವಿಡ್ ಸೋಂಕನ್ನು ಇಷ್ಟು ತಮಾಷೆಯಾಗಿ ತೆಗೆದುಕೊಳ್ಳಬಾರದು ಎಂದು ಕುಟುಕಿದ್ದಾರೆ.