ಲಸಿಕೆ ಅಭಿಯಾನ ಶುರುವಾದ ಒಂದು ವಾರದೊಳಗೆ, 15-18 ವರ್ಷ ವಯಸ್ಸಿನ 2 ಕೋಟಿ ಮಕ್ಕಳು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಲಸಿಕೆ ಪಡೆದ ಮಕ್ಕಳಿಗೆ ಅಭಿನಂದಿಸಿದ್ದಾರೆ.
ಮಕ್ಕಳನ್ನ ಲಸಿಕೆ ಪಡೆಯೋದಕ್ಕೆ ಹುರಿದುಂಬಿಸಿರೋ ಸಚಿವರು, 15-18 ವಯೋಮಾನದ ನಡುವಿನ 2 ಕೋಟಿಗೂ ಹೆಚ್ಚು ಯುವ ಜನತೆ ಕೊರೋನಾ ಲಸಿಕೆಯ ತಮ್ಮ ಮೊದಲ ಡೋಸ್ ಅನ್ನು, ಲಸಿಕೆ ಅಭಿಯಾನ ಚಾಲನೆಯಾದ ಒಂದು ವಾರದೊಳಗೆ ಸ್ವೀಕರಿಸಿದ್ದಾರೆ, ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 90 ಲಕ್ಷಕ್ಕೂ ಹೆಚ್ಚು (90,59,360) ಲಸಿಕೆ ಡೋಸ್‌ಗಳ ನೀಡಲಾಗಿದ್ದು, ದೇಶದಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ ಸಂಖ್ಯೆ 150.61 ಕೋಟಿ (150,61,92,903) ಎಂದು ತಾತ್ಕಾಲಿಕ ವರದಿಗಳಲ್ಲಿ ತಿಳಿದು ಬಂದಿದೆ.
ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ದೇಶದ 91% ವಯಸ್ಕ ಜನಸಂಖ್ಯೆ ತಮ್ಮ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಮತ್ತು ಶೇಕಡಾ 66 ಕ್ಕಿಂತ ಹೆಚ್ಚು ಜನರು ಎರಡೂ ಡೋಸ್‌ಗಳನ್ನ ಪಡೆದು ಸಂಪೂರ್ಣ ವ್ಯಾಕ್ಸಿನೇಟ್ ಆಗಿದ್ದಾರೆ.