alex Certify ಅಬ್ಬಬ್ಬಾ…..! ಒಂದೇ ಬಾರಿ ಬರೋಬ್ಬರಿ 60 ಪೂರಿಗಳನ್ನು ತಿಂದು ತೇಗಿದ ಪೊಲೀಸ್​ ಪೇದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…..! ಒಂದೇ ಬಾರಿ ಬರೋಬ್ಬರಿ 60 ಪೂರಿಗಳನ್ನು ತಿಂದು ತೇಗಿದ ಪೊಲೀಸ್​ ಪೇದೆ

ಒಂದು ಬಾರಿಗೆ ನೀವು ಎಷ್ಟು ಪೂರಿಯನ್ನು ಸೇವಿಸಬಲ್ಲಿರಿ.. ? ಇಂತಹದ್ದೊಂದು ಪ್ರಶ್ನೆ ಕೇಳಿದರೆ ನೀವು ಅಬ್ಬಬ್ಬಾ ಅಂದರೆ 20 ಅನ್ನಬಹುದೇನೋ. ಆದರೆ ಉತ್ತರ ಪ್ರದೇಶದ ಗೊಂಡಾ ರಿಸರ್ವ್ ಪೊಲೀಸ್​ ಲೈನ್​ನಲ್ಲಿ ಆಯೋಜಿಸಲಾಗಿದ್ದ ಬಡಾ ಖಾನಾ ಸ್ಪರ್ಧೆಯಲ್ಲಿ ಪೊಲೀಸ್​ ಪೇದೆಯೊಬ್ಬರು ಬರೋಬ್ಬರಿ 60 ಪೂರಿಗಳನ್ನು ಸೇವಿಸಿದ್ದಾರೆ.

ಪಿಎಸಿಯ ಮುಖ್ಯಪೇದೆಯಾಗಿರುವ ಹೃಷಿಕೇಶ್​ ರೈ ಎಂಬವರು ಒಂದೇ ಬಾರಿಗೆ 60 ಪೂರಿಗಳನ್ನು ತಿಂದು ತೇಗಿದ್ದಾರೆ.

ಮಂಗಳವಾರ ರಾತ್ರಿ ನೇಮಕಗೊಂಡವರ ಪಾಸಿಂಗ್ ಔಟ್ ಪರೇಡ್‌ಗೂ ಮುನ್ನ ಬಡಾ ಖಾನಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ರೀತಿಯ ಕಾರ್ಯಕ್ರಮವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಹೊಸದಾಗಿ ಸೇವೆಗೆ ನೇಮಕಗೊಂಡವರು ಹಾಗೂ ಸಿಬ್ಬಂದಿ ಒಟ್ಟಿಗೆ ಊಟ ಮಾಡುತ್ತಾರೆ. ಗರಿಷ್ಠ ಸಂಖ್ಯೆಯ ಪೂರಿ ಸೇವನೆ ಮಾಡಿದವರನ್ನು ಗೌರವಿಸಲಾಗುತ್ತದೆ.

60 ಪುರಿಗಳನ್ನು ಸೇವಿಸುವ ಮೂಲಕ 51 ಪೂರಿಗಳನ್ನು ತಿಂದ ತಮ್ಮ ಹಿಂದಿನ ದಾಖಲೆಯನ್ನು ಹೃಷಿಕೇಶ್​ ರೈ ಮುರಿದಿದ್ದಾರೆ. ಈ ಸಾಧನೆ ಮಾಡಿದ ಹೃಷಿಕೇಶ್​ರಿಗೆ ಗೌರವಾರ್ಥವಾಗಿ 1000 ರೂಪಾಯಿ ನೀಡಲಾಯ್ತು ಎನ್ನಲಾಗಿದೆ.

48 ಪೂರಿಗಳನ್ನು ಸೇವಿಸಿದ ಪೇದೆ ಅಮಿತ್​ ಕುಮಾರ್​ ಸಿಂಗ್​ 2ನೇ ಸ್ಥಾನವನ್ನು ಪಡೆದರು. ವಿಜೇತರಿಗೆ ಎಸ್​ಪಿ ಸಂತೋಷ್​ ಕುಮಾರ್​ ಮಿಶ್ರಾ ನಗದು ಬಹುಮಾನ ವಿತರಿಸಿದರು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...