ಚೆನ್ನೈ: ಕೆಲವರಿಗೆ ಒಬ್ಬರೇ ಮೆಟ್ರೋದಲ್ಲಿ ಪ್ರಯಾಣಿಸುವಾಗ ಬೇಸರವಾಗಬಹುದು. ಇನ್ನೂ ಕೆಲವರು ತಮ್ಮ ಬೇಸರವನ್ನು ತಪ್ಪಿಸಲು ಅನೇಕ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಬೇಸರವಾದಾಗ ಮೊಬೈಲ್ ನಲ್ಲಿ ಸಂಗೀತ ಕೇಳಬಹುದು ಅಥವಾ ಪುಸ್ತಕಗಳನ್ನು ಓದಬಹುದು. ಆದರೆ, ಕೆಲವರು ತಮ್ಮ ಸಹ-ಪ್ರಯಾಣಿಕರೊಂದಿಗೆ ಹಾಡುವುದನ್ನು ಇಷ್ಟಪಡುತ್ತಾರೆ.
ಹೌದು, ಇದೀಗ ಇಂಥದ್ದೇ ಒಂದು ಉಲ್ಲಾಸದ ವಿಡಿಯೋ ವೈರಲ್ ಆಗಿದೆ. ಚೆನ್ನೈ ಮೆಟ್ರೋದಲ್ಲಿ ಪ್ರಯಾಣಿಕರು ಎ.ಆರ್. ರೆಹಮಾನ್ ಅವರ ಹಾಡುಗಳಲ್ಲಿ ಒಂದನ್ನು ಹಾಡುತ್ತಾ ಸಂತೋಷಪಟ್ಟಿದ್ದಾರೆ. ಹಲವು ಮಂದಿ ಪ್ರಯಾಣಿಕರು ಸೇರಿ ತಮಿಳು ಹಾಡನ್ನು ಬಹಳ ಸಂಭ್ರಮದಿಂದ ಹಾಡಿದ್ದಾರೆ.
ವಿಡಿಯೋದಲ್ಲಿ, ಎ.ಆರ್. ರೆಹಮಾನ್ ಅವರ ಭಾವಪೂರ್ಣ ಹಾಡು ಆಥಂಗರಾ ಮರಮೆಯನ್ನು ಹಾಡಿದ್ದಾರೆ. ಆಸನದಲ್ಲಿ ಕುಳಿತಿದ್ದಂತಹ ಒಬ್ಬ ವ್ಯಕ್ತಿಯು ಗಿಟಾರ್ ನುಡಿಸಿದ್ರೆ, ಇನ್ನೊಬ್ಬರು ಪಿಯಾನೋ ನುಡಿಸಿದ್ದಾರೆ. ಹಲವಾರು ಮಂದಿ ಒಟ್ಟಿಗೆ ಸೇರಿ ಹಾಡುವ ಮುಖಾಂತರ ಸಂಭ್ರಮಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ 2.8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸುವ ಮೂಲಕ ಭಾರಿ ವೈರಲ್ ಆಗಿದೆ. ನೆಟ್ಟಿಗರು ಸಹಪ್ರಯಾಣಿಕರು ಸೇರಿ ಹಾಡಿರುವ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.