ಮುಂಬೈ: ಐಪಿಎಲ್ ಟ್ರೋಫಿಗೆ ಹೊಸದಾಗಿ ಎರಡು ತಂಡಗಳು ಎಂಟ್ರಿ ಆಗಿವೆ. ಮುಂಬರುವ ಟೂರ್ನಿಯಲ್ಲಿ ಈ ಎರಡು ತಂಡಗಳ ಕಾದಾಟ ಆರಂಭವಾಗಲಿದೆ. ಹೊಸ ಫ್ರಾಂಚೈಸಿ ಲಕ್ನೋ ತಂಡದ ಮೆಂಟರ್ ಆಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ.
ಗಂಭೀರ್ ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಅವರಿದ್ದ ಅವಧಿಯಲ್ಲಿ ಕೆಕೆಆರ್ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಆ ನಂತರ ಅವರು ದೆಹಲಿ ತಂಡದ ನಾಯಕರಾಗಿದ್ದರು. ಈ ತಂಡ ನಿನ್ನೆಯಷ್ಟೇ ಜಿಂಬಾಬ್ವೆಯ ಮಾಜಿ ವಿಕೆಟ್ ಕೀಪರ್ ಆಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿತ್ತು.
ಸದ್ಯ ಮೆಂಟರ್ ಆಗಿ ಗಂಭೀರ್ ಆಯ್ಕೆಯಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗಂಭೀರ್ 154 ಪಂದ್ಯಗಳನ್ನಾಡಿ 4217 ರನ್ ಗಳಿಸಿದ್ದಾರೆ.
ಈ ತಂಡದ ನಾಯಕರಾಗಿ ಕೆ.ಎಲ್. ರಾಹುಲ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ, ಇಶಾನ್ ಕಿಶನ್ ಹಾಗೂ ರಶೀದ್ ಖಾನ್ ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತಿದೆ.