alex Certify ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ…..!

ಮೇಷ : ದಾಂಪತ್ಯ ಜೀವನದಲ್ಲಿ ಅನೇಕ ಸಕಾರಾತ್ಮಕ ಬೆಳವಣಿಗೆಗಳನ್ನು ಕಾಣಲಿದ್ದೀರಿ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಇದು ಕಠಿಣ ಸಮಯವಾಗಿದೆ. ಕಚೇರಿ ಕೆಲಸಗಳಲ್ಲಿ ನೆಮ್ಮದಿ ಇರಲಿದೆ.

ವೃಷಭ : ಸಾರ್ವಜನಿಕ ಜೀವನದಲ್ಲಿ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ನೀವು ಮುಜುಗರಕ್ಕೆ ಈಡಾಗುವ ಸಾಧ್ಯತೆ ಇದೆ. ನಿಮ್ಮ ಸೋಮಾರಿತನದಿಂದಾಗಿ ಕಚೇರಿಯಲ್ಲಿ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಿರಿ.

ಮಿಥುನ : ತಲತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಉದ್ಯಮದ ಜವಾಬ್ದಾರಿಯು ಇಂದಿನಿಂದ ನಿಮ್ಮ ಹೆಗಲೇರಲಿದೆ. ವ್ಯವಹಾರ ವಿಸ್ತರಿಸುವ ಬಗ್ಗೆ ಮನೆಯವರ ಜೊತೆ ಚರ್ಚೆ ನಡೆಸಲಿದ್ದೀರಿ. ವೈವಾಹಿಕ ಜೀವನದಲ್ಲಿ ನೆಮ್ಮದಿ ಕಾದಿದೆ.

ಕಟಕ : ಇನ್ನೊಬ್ಬರ ತಪ್ಪನ್ನು ಎತ್ತಿ ಹೇಳುವ ಮುನ್ನ ನೀವೆಷ್ಟು ಸರಿ ಇದ್ದೀರಿ ಎಂಬುದನ್ನು ಅವಲೋಕನ ಮಾಡಿಕೊಳ್ಳುವುದು ಉತ್ತಮ. ಸಂಗಾತಿಯ ಬಗ್ಗೆ ಅತಿಯಾದ ಅನುಮಾನ ಸಲ್ಲದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಸಿಂಹ : ಮನೆಯಲ್ಲಿ ತಂದೆಯ ಆರೋಗ್ಯವು ಹದಗೆಡಲಿದೆ. ಇದರಿಂದ ಆತಂಕ ಹೆಚ್ಚಲಿದೆ. ಮೃತ್ಯುಂಜಯ ಜಪ ಪಠಿಸಿ. ದಾಂಪತ್ಯ ಜೀವನದಲ್ಲಿ ಉತ್ತಮ ಬದಲಾವಣೆ ಇರಲಿದೆ. ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ನೀಡಲಿದ್ದಾರೆ.

ಕನ್ಯಾ : ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ನೀವಿಂದು ಅತಿಯಾಗಿ ಖರ್ಚು ಮಾಡಲಿದ್ದೀರಿ. ಇದರಿಂದ ಕೊಂಚ ಆತಂಕ ಎನಿಸಲಿದೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ.

ತುಲಾ : ವಿದ್ಯಾರ್ಥಿಗಳ ಪಾಲಿಗೆ ಈ ದಿನ ಉತ್ತಮವಾಗಿ ಇರಲಿದೆ. ಸಾಲಗಾರರಿಗೆ ಇಂದು ಯಾವುದೇ ಕಾರಣಕ್ಕೂ ಹಣ ನೀಡಬೇಡಿ. ಆ ಹಣವು ವಾಪಸ್​ ಬರೋದೇ ಇಲ್ಲ. ಹೊರಗಿನ ಆಹಾರಗಳ ಸೇವನೆ ಬೇಡ .ಇಲ್ಲವಾದಲ್ಲಿ ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ವೃಶ್ಚಿಕ : ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದುಕೊಂಡ ವಿದ್ಯಾರ್ಥಿಗಳ ಕನಸು ನನಸಾಗಲಿದೆ. ಕಲಾವಿದರ ಪಾಲಿಗೆ ಈ ದಿನ ಉತ್ತಮವಾಗಿ ಇರಲಿದೆ. ನೀವು ಮೇಲಾಧಿಕಾರಿಗಳಾಗಿದ್ದರೆ ನಿಮ್ಮ ಕೆಳಗೆ ಕೆಲಸ ಮಾಡುವವರು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ.

ಧನು : ಉದ್ಯಮದಲ್ಲಿ ಅನಿರೀಕ್ಷಿತ ಲಾಭವನ್ನು ಸಂಪಾದಿಸಲಿದ್ದೀರಿ. ತಂದೆಯು ನಿಮ್ಮ ವ್ಯಾಪಾರದ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಜನರಿಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಲಿದೆ.

ಮಕರ : ಸ್ನೇಹಿತರ ಆರ್ಥಿಕ ಸಂಕಷ್ಟಗಳಿಗೆ ನೀವಿಂದು ನೆರವಾಗಲಿದ್ದೀರಿ. ಇದರಿಂದ ಸ್ನೇಹಿತ ನಿಮಗೆ ಕೃತಜ್ಞರಾಗಿ ಇರಲಿದ್ದಾರೆ. ವೈವಾಹಿಕ ಜೀವನದಲ್ಲಿ ಸುಧಾರಣೆ ಕಂಡುಬರುವುದು. ಕಲಾವಿದರಿಗೆ ಈ ದಿನ ಶುಭಕರವಾಗಿಲ್ಲ. ಅಗ್ನಿಯಿಂದ ಅಂತರ ಕಾಯ್ದುಕೊಳ್ಳಿ.

ಕುಂಭ : ಕುಟುಂಬಕ್ಕೆ ಎದುರಾದ ಬಿಕ್ಕಟ್ಟನ್ನು ಎದುರಿಸುವಲ್ಲಿ ನೀವು ಮಹತ್ವದ ಪಾತ್ರ ವಹಿಸಲಿದ್ದೀರಿ. ಇದು ನಿಮ್ಮ ಕುಟುಂಬದವರ ಸಂತೋಷಕ್ಕೆ ಕಾರಣವಾಗಲಿದೆ. ಶುಭ ಕಾರ್ಯದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಇದರಿಂದ ಅತಿಯಾಗಿ ದಣಿಯುವ ಸಾಧ್ಯತೆ ಇದೆ.

ಮೀನ : ನಿಮ್ಮ ಸಹೋದರಿಗೆ ನೀವಿಂದು ಬೆಲೆಬಾಳುವ ಆಭರಣವನ್ನು ಉಡುಗೊರೆಯಾಗಿ ನೀಡುವಿರಿ. ಇದರಿಂದ ಸಹೋದರಿಯು ಸಂತೋಷಗೊಳ್ಳಲಿದ್ದಾರೆ. ಮನೆಯಲ್ಲಿ ನೆಮ್ಮದಿ ನೆಲೆಸುವಂತಹ ಪ್ರಸಂಗವೊಂದಕ್ಕೆ ಸಾಕ್ಷಿಯಾಗಲಿದ್ದೀರಿ. ‘‘

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...