ತಾಲಿಬಾನ್ ವಕ್ತಾರನೊಂದಿಗೆ ಪಾಕಿಸ್ತಾನದ ಪತ್ರಕರ್ತ ಫ್ಲೈಯಿಂಗ್ ಕಿಸ್ ವಿನಿಮಯ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋ ಕರೆಯಲ್ಲಿ ಇಬ್ಬರೂ ಕೂಜ ಸೌಹಾರ್ದ ಸಂಭಾಷಣೆಯಲ್ಲಿ ತೊಡಗಿರುವುದನ್ನು ನೋಡಬಹುದು. ವಿಡಿಯೋದಲ್ಲಿ, ಪತ್ರಕರ್ತ ಫಾರೂಕಿ ಜಮೀಲ್ ಅವರು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಶಾಹೀನ್ ಕೂಡ ಅವನ ಕಡೆಗೆ ಫ್ಲೈಯಿಂಗ್ ಕಿಸ್ ಅನ್ನು ಕಳುಹಿಸಿದ್ದಾನೆ.
ವಿಡಿಯೋದಲ್ಲಿ ತಾಲಿಬಾನ್ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಲು ತಾಲಿಬಾನ್ಗೆ ಬರಲು ಬಯಸುವುದಾಗಿ ಪತ್ರಕರ್ತ ಹೇಳಿದ್ದಾರೆ. ಇವರಿಬ್ಬರ ನಡುವಿನ ಸಂಭಾಷಣೆಯು ಅವರ ಖಾಸಗಿ ಕರೆಯಿಂದ ಸೋರಿಕೆಯಾಗಿದೆ ಎಂದು ತೋರುತ್ತಿದೆ. ಈ ಮಧ್ಯೆ ವಿಡಿಯೋದ ಟಿಕ್ ಟಾಕ್ ಆವೃತ್ತಿಯು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
ಪತ್ರಕರ್ತ ಅರ್ಷದ್ ಯೂಸುಫ್ಜೈ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಯೋತ್ಪಾದಕನೊಂದಿಗೆ ಪಾಕಿಸ್ತಾನಿ ಪತ್ರಕರ್ತ ಎಂದು ಕರೆಯಲ್ಪಡುವವರು ಫ್ಲೈಯಿಂಗ್ ಕಿಸ್ ಅನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಪತ್ರಕರ್ತರು ಅಫ್ಘನ್ ಗೆ ತೆರಳುವುದಾಗಿಯೂ ಹೇಳಿದ್ದಾರೆ. ಆದರೆ, ಅಫ್ಘಾನಿಸ್ತಾನದ ಪತ್ರಕರ್ತರು ಅವಮಾನ, ಚಿತ್ರಹಿಂಸೆ, ತಮ್ಮ ಜೀವಗಳನ್ನು ಹಾಗೂ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದ್ದಾರೆ.
ಗಮನಾರ್ಹವಾಗಿ, ತಾಲಿಬಾನ್ ಅನ್ನು ಬಹಿರಂಗವಾಗಿ ಸ್ವಾಗತಿಸಿದ ವಿಶ್ವದ ಏಕೈಕ ದೇಶವೆಂದ್ರೆ ಅದು ಪಾಕಿಸ್ತಾನವಾಗಿದೆ. ಆದರೆ, ಉಳಿದ ಪ್ರಪಂಚವು ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುತ್ತದೆ.