ನವದೆಹಲಿ: ಎರಡು ರಾಷ್ಟ್ರೀಯ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಇಂದು ಮತ್ತು ನಾಳೆ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಎರಡು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣಗೊಳಿಸಲು ಮುಂದಾಗಿದ್ದು, ಸರ್ಕಾರದ ನಿರ್ಧಾರದ ವಿರುದ್ಧ ಎಸ್ಬಿಐ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ 9 ಲಕ್ಷಕ್ಕೂ ಅಧಿಕ ನೌಕರರು ಡಿಸೆಂಬರ್ 16, 17 ರಂದು ದೇಶಾದ್ಯಂತ ಮುಷ್ಕರ ಕೈಗೊಂಡಿದ್ದಾರೆ.
ಇದರಿಂದಾಗಿ ಇಂದು ಮತ್ತು ನಾಳೆ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಹಣ ಪಾವತಿ, ವಿತ್ ಡ್ರಾ, ಚೆಕ್ ಕ್ಲಿಯರೆನ್ಸ್ ಮೊದಲಾದ ಸೇವೆಗಳಲ್ಲಿ ವ್ಯತ್ಯಯವಾಗಬಹುದು. ಎರಡು ದಿನ ಮುಷ್ಕರದ ಕಾರಣ ಎಟಿಎಂಗಳಲ್ಲಿಯೂ ಹಣದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.