ಕೊರೊನಾ ನಂತರ ವರ್ಕ್ ಫ್ರಂ ಹೋಮ್ ನಿಯಮ ಜಾರಿಗೆ ಬಂದಿದೆ. ಕಚೇರಿಗಿಂತ ಮನೆಯಲ್ಲಿರುವ ಉದ್ಯೋಗಿಗಳು ಹೆಚ್ಚು ಕೆಲಸ ಮಾಡ್ತಿದ್ದಾರೆ. ಇದು ಅವರ ಒತ್ತಡವನ್ನು ಹೆಚ್ಚಿಸಿದೆ. ವರ್ಕ್ ಫ್ರಂ ಹೋಮ್ ನಿಂದ ಹಿಂಸೆಯಾಗ್ತಿದೆ ಎನ್ನುವವರಿಗೆ ಖುಷಿ ಸುದ್ದಿಯೊಂದಿದೆ.
ಕೇಂದ್ರ ಸರ್ಕಾರ ಶೀಘ್ರದಲ್ಲೇ ವರ್ಕ್ ಫ್ರಂ ಹೋಮ್ ಅಡಿಯಲ್ಲಿ ಕಾನೂನನ್ನು ರಚಿಸಲಿದೆ. ಕಂಪನಿಯು ತನ್ನ ಉದ್ಯೋಗಿ ಬಗ್ಗೆ ಯಾವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದನ್ನು ಇದರಲ್ಲಿ ವ್ಯಾಖ್ಯಾನಿಸಲಾಗುವುದು.
ಮಾವನ ಪಿಎಫ್ ಹಣದ ಆಸೆಗೆ ಪತ್ನಿಯನ್ನೇ ಕೊಂದ ಪಾಪಿ
ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಯಾವುದೇ ಕೆಲಸದ ಸಮಯ ನಿಗದಿಯಾಗ್ತಿಲ್ಲ. ಕಚೇರಿಗಿಂತ ಮನೆಯಲ್ಲಿ ಉದ್ಯೋಗಿಗಳು ಹೆಚ್ಚು ಕೆಲಸ ಮಾಡ್ತಿದ್ದಾರೆ. ಈ ಬಗ್ಗೆ ಅನೇಕರು ಆರೋಪ ಮಾಡಿದ್ದಾರೆ. ಆದ್ರೆ ಕಚೇರಿ ವಿರುದ್ಧ ದನಿ ಎತ್ತಲು ಯಾವುದೇ ಕಾನೂನು ಅವರಿಗಿಲ್ಲ. ಹಾಗಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಇದಲ್ಲದೇ ಮನೆಯಿಂದ ಕೆಲಸ ಮಾಡುವಾಗ ವಿದ್ಯುತ್ ಮತ್ತು ಇಂಟರ್ನೆಟ್‌ನಂತಹ ವೆಚ್ಚಗಳಿಗೆ ಕಂಪನಿಯು ಎಷ್ಟು ಹಣವನ್ನು ಪಾವತಿಸಬೇಕು ಎಂಬುದನ್ನೂ ಕಾನೂನಿನಲ್ಲಿ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಪೋರ್ಚುಗಲ್‌ನಲ್ಲಿ ಇತ್ತೀಚೆಗೆ ಇದಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿಗೆ ಬಂದಿದೆ. ಇದು ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚಿನ ರಕ್ಷಣೆ ನೀಡುತ್ತಿದೆ.