ಬಹಳ ದಿನಗಳಿಂದ ಯುವಜನತೆ ಕಾಯುತ್ತಿರುವ ಟ್ರಂಫ್ ಟೈಗರ್ ಸ್ಪೋರ್ಟ್ 660 ಸರಣಿಯ ಬೈಕುಗಳು ಭಾರತಲ್ಲಿ ಲಾಂಚ್ ಆಗಲಿದ್ದು, ಮುಂಗಡ ಬುಕಿಂಗ್ ಸ್ಲಾಟ್‌ಗಳನ್ನು ಕಂಪನಿ ತನ್ನ ಗ್ರಾಹಕರಿಗೆ ಮುಕ್ತಗೊಳಿಸಿದೆ. ತನ್ನ ಬೈಕ್ ಗಳನ್ನು ಭಾರತದಲ್ಲಿ ಲಾಂಚ್ ಮಾಡುವುದು ಯಾವಾಗ ಎಂದು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.
ಬ್ರಿಟನ್ ಮೂಲದ ಟ್ರಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಅನ್ನು ನೀವೂ ಸಹ 50,000 ರೂಪಾಯಿ ಕೊಟ್ಟು ಮುಂಗಡ ಬುಕಿಂಗ್ ಮಾಡಬಹುದಾಗಿದೆ.
ಸಾಹಸ ಹಾಗೂ ಪ್ರವಾಸಕ್ಕೆ ಹೇಳಿಮಾಡಿಸಿದ ಈ ಬೈಕ್‌ನಲ್ಲಿ ಅವಳಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಪೈಲಟ್ ಲ್ಯಾಂಪ್, ಎತ್ತರದ ವಿಂಡ್ ಸ್ಕ್ರೀನ್, ಕಟ್ಟುಮಸ್ತಾಗಿ ಕಾಣುವ ಇಂಧನ ಟ್ಯಾಂಕ್‌ಗಳು ಆಕ್ರಮಣಶೀಲ ಲುಕ್ ಕೊಡಮಾಡಿವೆ.
ಚಳಿಗಾಲದಲ್ಲಿ ಹೀಗಿರಲಿ ಕೂದಲಿನ ರಕ್ಷಣೆ
ಎಲ್‌ಸಿಡಿ ಹಾಗೂ ಟಿಎಫ್‌ಟಿ ಡಿಸ್ಪ್ಲೇಗಳೊಂದಿಗೆ ಎರಡು ಭಾಗದ ಇನ್‌ಸ್ಟುಮೆಂಟ್ ಕ್ಲಸ್ಟರ್ ಅನ್ನು ಟ್ರಂಫ್ ಬೈಕ್ ಹೊಂದಿರಲಿದೆ. ರೈಡ್ ಬೈ ವಯರ್ ಥ್ರಾಟಲ್‌ನೊಂದಿಗೆ, ಮಳೆ ಹಾಗೂ ರಸ್ತೆಗಳಲ್ಲಿ ರೈಡಿಂಗ್ ಮೋಡ್‌ಗಳಲ್ಲಿ ಟ್ರಾಕ್ಷನ್ ನಿಯಂತ್ರಣ, ಎಬಿಎಸ್ ಮಧ್ಯಪ್ರವೇಶಗಳೆಂಬ ಆಕರ್ಷಕ ಫೀಚರ್‌ಗಳನ್ನು ನೀಡಲಾಗಿದೆ.
660ಸಿಸಿ, ತ್ರಿವಳಿ ಸಿಲಿಂಡರ್ ಇಂಜಿನ್‌ನಿಂದ ಶಕ್ತಿ ಪಡೆಯುವ ಟ್ರಂಫ್ ಟೈಗರ್ ಸ್ಪೋರ್ಟ್ 660, 80 ಬಿಎಚ್‌ಪಿ ಹಾಗೂ 64ಎನ್‌ಎಂನಷ್ಟು ಗರಿಷ್ಠ ಟಾರ್ಕ್ ಹೊಂದಿದೆ. ಇದರೊಂದಿಗೆ, ಸ್ಲಿಪ್ ಹಾಗೂ ಅಸಿಸ್ಟ್ ಕ್ಲಚ್‌ಗಳೊಂದಿಗೆ ಆರು ಸ್ಪೀಡ್ ಗೇರ್ ಬಾಕ್ಸ್‌ಗಳನ್ನೂ ನೀಡಲಾಗಿದೆ. ಮುಂದಿನ ಚಕ್ರಕ್ಕೆ 310ಎಂಎಂ ಹಾಗೂ ಹಿಂದಿನ ಚಕ್ರಕ್ಕೆ 255ಎಂಎಂ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ.