alex Certify ರೈಲ್ವೇ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಕುರಿತು ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೇ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಕುರಿತು ಇಲ್ಲಿದೆ ವಿವರ

ನವದೆಹಲಿ: ರೈಲ್ವೆ ನೇಮಕಾತಿ ಸೆಲ್, ಸೆಂಟ್ರಲ್ ರೈಲ್ವೇ (CR) ಹಂತ 1 ಮತ್ತು 2 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ RRC ವೆಬ್‌ಸೈಟ್ rrccr.com ನಲ್ಲಿ ಅರ್ಜಿ ಸಲ್ಲಿಸಬಹುದು.

ಅಪ್ಲಿಕೇಶನ್ ಪ್ರಕ್ರಿಯೆಯು ಡಿಸೆಂಬರ್ 6 ರಂದು ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 20, 2021 ರಂದು ಕೊನೆಗೊಳ್ಳುತ್ತದೆ. ನೇಮಕಾತಿ ಡ್ರೈವ್ ಕೇಂದ್ರ ರೈಲ್ವೇಯಲ್ಲಿ 12 ಹುದ್ದೆಗಳನ್ನು ಹೊಂದಿವೆ.

ಕೇಂದ್ರ ರೈಲ್ವೇ ನೇಮಕಾತಿ 2021: ಹುದ್ದೆಯ ವಿವರಗಳು

ಹಂತ 2 – 2 ಪೋಸ್ಟ್‌ಗಳು

ಹಂತ 1 – 10 ಪೋಸ್ಟ್‌ಗಳು

2021-22 ನೇ ಸಾಲಿನ ಸೆಂಟ್ರಲ್ ರೈಲ್ವೇ ಇಲಾಖೆಯ ಹಂತ 1 ರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಲ್ಲಿ ಮುಂಬೈ, ಭೂಸಾವಲ್, ನಾಗ್ಪುರ, ಪುಣೆ ಮತ್ತು ಸೋಲಾಪುರ ವಿಭಾಗಕ್ಕೆ ತಲಾ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಕೇಂದ್ರ ರೈಲ್ವೇ ನೇಮಕಾತಿ 2021: ಅರ್ಹತಾ ಮಾನದಂಡ

ಹಂತ 2 – 12 ನೇ (+2 ಹಂತ) ಉತ್ತೀರ್ಣ ಅಥವಾ ಕನಿಷ್ಠ ಶೇ. 50 ಅಂಕ ಪಡೆದಿರಬೇಕು.

ಅಥವಾ

ಕೋರ್ಸ್ ಪೂರ್ಣಗೊಳಿಸಿದ ಆಕ್ಟ್ ಅಪ್ರೆಂಟಿಸ್‌ಶಿಪ್‌ನೊಂದಿಗೆ 10ನೇ ತರಗತಿ ತೇರ್ಗಡೆಯಾಗಿರಬೇಕು.

ಹಂತ 1- 10 ನೇ ತರಗತಿ ಉತ್ತೀರ್ಣ ಅಥವಾ ಐಟಿಐ ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (ಎನ್‌ಎಸಿ) ಪಡೆದಿರಬೇಕು.

ಅಥವಾ

10ನೇ ತರಗತಿ ತೇರ್ಗಡೆ ಜೊತೆಗೆ ಎನ್ ಸಿವಿಟಿ ಇಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (ಎನ್ಎಸಿ) ಪಡೆದಿರಬೇಕು.

ಅಥವಾ

10ನೇ ತರಗತಿ ತೇರ್ಗಡೆ ಜೊತೆಗೆ ಐಟಿಐ ಪ್ರಮಾಣಪತ್ರ ಪಡೆದಿರಬೇಕು.

ಕೇಂದ್ರ ರೈಲ್ವೆ ನೇಮಕಾತಿ 2021: ವಯಸ್ಸಿನ ಮಿತಿ

ಲೆವೆಲ್ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಹಂತ 1 ಹುದ್ದೆಗಳಿಗೆ, ಅಭ್ಯರ್ಥಿಗಳು 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು.

ಕೇಂದ್ರ ರೈಲ್ವೆ ನೇಮಕಾತಿ 2021: ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ರೂ. 250 ಅನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಆದರೆ, ಇತರ ವರ್ಗದ ಅಭ್ಯರ್ಥಿಗಳು ರೂ. 500 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...