alex Certify ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದ ವಿದೇಶಿ ಪ್ರಜೆ ರಾಜ್ಯದಿಂದ ಎಸ್ಕೇಪ್​…..! ಹೆಚ್ಚಿದ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದ ವಿದೇಶಿ ಪ್ರಜೆ ರಾಜ್ಯದಿಂದ ಎಸ್ಕೇಪ್​…..! ಹೆಚ್ಚಿದ ಆತಂಕ

ವಾರದ ಹಿಂದಷ್ಟೇ ಕರ್ನಾಟಕದಲ್ಲಿ ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದ 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆ ಭಾರತದಿಂದ ನಿರ್ಗಮಿಸಿದ್ದು ಆತಂಕಕ್ಕೆ ಕಾರಣವಾಗಿದೆ.

ನವೆಂಬರ್​ 20ರಂದು ಬೆಂಗಳೂರಿಗೆ ಆಗಮಿಸಿದ್ದ ದಕ್ಷಿಣ ಆಫ್ರಿಕಾದ ಪ್ರಜೆಯು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಕಳೆದ ವಾರವಷ್ಟೇ ಖಾಸಗಿ ಲ್ಯಾಬ್​​ನಿಂದ ತಯಾರಿಸಲಾದ ನೆಗೆಟಿವ್​ ವರದಿ ತೋರಿಸುವ ಮೂಲಕ ದಕ್ಷಿಣ ಆಫ್ರಿಕಾ ಪ್ರಜೆಯು ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ಕೊರೊನಾ ವೈರಸ್​​ ಸೋಂಕಿಗೆ ಒಳಗಾದ ಬಳಿಕ ದಕ್ಷಿಣ ಆಫ್ರಿಕಾದ ಪ್ರಜೆಯು ಹೇಗೆ ನೆಗೆಟಿವ್​ ವರದಿ ಪಡೆದರು ಹಾಗೂ ಅವರ ಜಿನೋಮಿಕ್​ ವರದಿಗೆ ಕಾಯುತ್ತಿರುವ ನಡುವೆಯೇ ವಿದೇಶಕ್ಕೆ ಅದು ಹೇಗೆ ಪ್ರಯಾಣ ಬೆಳೆಸಿದ್ರು ಎಂಬುದರ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.

66 ವರ್ಷದ ವ್ಯಕ್ತಿಯು ಹೋಟೆಲ್​ ಒಂದರಲ್ಲಿ ಐಸೋಲೇಟ್​ ಆಗಿದ್ದರು. ಆದರೆ ಈಗ ಅವರು ಹೋಟೆಲ್​ನಿಂದ ತೆರಳಿದ್ದಾರೆ. ಮೊದಲು ಅವರ ಕೋವಿಡ್​ ವರದಿಯು ಪಾಸಿಟಿವ್​ ಬಂದಿತ್ತು. ಬಳಿಕ ವರದಿ ನೆಗೆಟಿವ್​​ ಬಂದಿದೆ. ನೆಗೆಟಿವ್​ ವರದಿಯು ಸರಿಯಾಗಿದೆಯೇ ಅಥವಾ ಏನಾದರೂ ಅಕ್ರಮ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಪೊಲೀಸ್​ ಕಮಿಷನರ್​​ಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದ್ದಾರೆ.

ಈ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ವಿದೇಶಿ ಪ್ರಜೆಯ ಕೊರೊನಾ ವರದಿಗಳ ಬಗ್ಗೆ ಈಗಲೂ ಅನುಮಾನವಿದೆ. ಹೀಗಾಗಿ ನೆಗೆಟಿವ್​ ವರದಿ ನೀಡಿದ ಪ್ರಯೋಗಾಲಯದ ಬಗ್ಗೆ ತನಿಖೆಗೆ ಆದೇಶಿಸಿದಲಾಗಿದೆ. ಬಿಬಿಎಂಪಿ ಆಯುಕ್ತರು ಈ ಸಂಬಂಧ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...