ಸಫಾರಿ ವಾಹನದ ಮೇಲೆ ಗಜರಾಜನ ದಾಳಿ: ಮೈಜುಮ್ಮೆನ್ನಿಸುವ ವಿಡಿಯೋ ವೈರಲ್ 04-12-2021 10:11AM IST / No Comments / Posted In: Latest News, Live News, International ನ್ಯಾಷನಲ್ ಪಾರ್ಕ್ ಗಳಲ್ಲಿ ಸಫಾರಿ ಮಾಡೋವಾಗ ಬಹಳ ಜಾಗರೂಕತೆಯಿಂದ ಇರಬೇಕು. ಇತ್ತೀಚೆಗಷ್ಟೇ ಸಿಂಹವೊಂದು ಸಫಾರಿ ಜೀಪ್ ನ ಹಗ್ಗ ಹಿಡಿದು ಎಳೆದಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಆನೆ ದಾಳಿಯ ಮೈಜುಮ್ಮೆನಿಸುವ ವಿಡಿಯೋ ವೈರಲ್ ಆಗಿದೆ. ದಕ್ಷಿಣ ಆಫ್ರಿಕಾದ ಸೆಲಾಟಿ ಗೇಮ್ ರಿಸರ್ವ್ನಲ್ಲಿ ಆನೆಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡಿರುವ ಭಯಾನಕ ವಿಡಿಯೋ ವೈರಲ್ ಆಗಿದೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ತರಬೇತಿ ಮಾರ್ಗದರ್ಶಕರನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಗಿಡಗಂಟಿಗಳಿಂದ ಹೊರಬಂದ ಆನೆಯೊಂದು ನೇರವಾಗಿ ಸಫಾರಿ ವಾಹನದತ್ತ ಓಡುತ್ತಾ ಬಂದು ದಾಳಿ ಮಾಡಿದೆ. ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಕೆನರಾ ಬ್ಯಾಂಕಿನಿಂದ ‘ಬಂಪರ್’ ಆಫರ್ ಆಕ್ರಮಣಕಾರಿ ಆನೆಯಿಂದ ದಾಳಿಗೊಳಗಾದ ಜೀಪ್ ನ ಟ್ರೈನಿ ಗೈಡ್ಗಳು ಹೆದರಿ ಓಡಿದ್ದಾರೆ. ಬಳಿಕ ಆನೆ ಕೂಡ ಏನು ಮಾಡದೆ ಹಿಂದಿರುಗಿದೆ. ಮೈ ಜುಮ್ಮೆನ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್ ಮತ್ತು ಫೇಸ್ಬುಕ್ನಲ್ಲಿ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಸಂತಾನೋತ್ಪತ್ತಿ ಹಿಂಡಿನ ಜೊತೆಯಲ್ಲಿದ್ದ ಆನೆ ಬುಲ್ ಏಕಾಏಕಿ ದಾಳಿ ಮಾಡಿದೆ. ಸಂಯೋಗದ ಅವಧಿಯಲ್ಲಿ ಗಂಡು ಆನೆಗಳು ಈ ರೀತಿ ಆಕ್ರಮಣಶೀಲತೆಯನ್ನು ವರ್ತಿಸುವುದು ಸಾಮಾನ್ಯ ಎಂದು ತರಬೇತಿ ಪಡೆದ ಮಾರ್ಗದರ್ಶಕರು ತಿಳಿಸಿದ್ದಾರೆ. Too much intrusion will take your life in Wilderness. However, wild animals keeps on forgiving us since long.#responsible_tourism specially wildlife tourism should be educational rather recreational. हांथी के इतना घुसा नही जाता 🙏 watch second video too pic.twitter.com/AOKGZ2BAjB — WildLense® Eco Foundation 🇮🇳 (@WildLense_India) November 30, 2021