ರಾಯಚೂರು: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2020-21ನೇ ಸಾಲಿಗೆ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಶುಲ್ಕವಿನಾಯಿತಿ ಮೊತ್ತವು ಮಂಜೂರಾಗಿದೆ.
ಸದರಿ ಈ ಯೋಜನೆಯಡಿಯಲ್ಲಿ ಕೆಲವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯು ಆಧಾರ್ ಸಂಖ್ಯೆಗೆ ಜೋಡಣೆಯಾಗದ ಕಾರಣ ಶುಲ್ಕ ವಿನಾಯಿತಿ ಮೊತ್ತವು ಮಂಜೂರಾಗಿದ್ದರೂ ಸಹ ವಿದ್ಯಾರ್ಥಿಗಳಿಗೆ ಜಮೆಯಾಗಿರುವುದಿಲ್ಲ, ಇಂತಹ ವಿದ್ಯಾರ್ಥಿಗಳು ಕೂಡಲೇ ಸಂಬಂಧಪಟ್ಟ, ಬ್ಯಾಂಕ್ ಗಳನ್ನು ಸಂಪರ್ಕಿಸಿ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಿ ಎನ್ಪಿಸಿಐ ಮ್ಯಾಪಿಂಗ್ ಕಡ್ಡಾಯವಾಗಿ ಮಾಡಿಸಿಬೇಕು. ಒಂದು ವೇಳೆ ತಪ್ಪಿದ್ದಲ್ಲಿ ತಮಗೆ ಮಂಜೂರಾಗಿರುವ ಶುಲ್ಕವಿನಾಯಿತಿ ಮೊತ್ತವು ತನ್ನಿಂತಾನೆ ರದ್ದಾಗುವುದು ಎಂದು ಹೇಳಲಾಗಿದೆ.
ಆಧಾರ್ ನೇಮ್ ಮಿಸ್ ಮ್ಯಾಚ್ ಆಗಿರುವ ವಿದ್ಯಾರ್ಥಿಗಳು ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿರುವAತೆ ಆಧಾರ್ ಕಾರ್ಡ್ ನಲ್ಲಿಯೂ ಸಹ ಹೆಸರನ್ನು ತಿದ್ದುಪಡಿ ಮಾಡಿಸಿಬೇಕಾಗಿರುತ್ತದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.