alex Certify 10 ನಿಮಿಷಗಳಿಗಿಂತ ಹೆಚ್ಚು ಕಾಲ ಟಾಯ್ಲೆಟ್‍ನಲ್ಲೇ ಇರ್ತೀರಾ..? ಇನ್ಮುಂದೆ ಈ ತಪ್ಪು ಮಾಡುವ ಮುನ್ನ ಈ ಸ್ಟೋರಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ನಿಮಿಷಗಳಿಗಿಂತ ಹೆಚ್ಚು ಕಾಲ ಟಾಯ್ಲೆಟ್‍ನಲ್ಲೇ ಇರ್ತೀರಾ..? ಇನ್ಮುಂದೆ ಈ ತಪ್ಪು ಮಾಡುವ ಮುನ್ನ ಈ ಸ್ಟೋರಿ ಓದಿ

ಅದೆಷ್ಟೋ ಜನರು ಟಾಯ್ಲೆಟ್ ಗೆ ಹೋದ್ರೆ ಬಹಳ ಹೊತ್ತಾದ್ರೂ ಹೊರಗೆ ಬರೋದಿಲ್ಲ. ಅವರಲ್ಲಿ ಹೆಚ್ಚಿನವರು ತಮ್ಮ ಆಫೀಸ್ ಕೆಲಸಗಳಿಗಾಗಿ ಅಥವಾ ಇನ್ನಿತರೆ ವಿಚಾರಗಳಿಗೆ ಫೋನ್ ಬಳಸುತ್ತಾ ಶೌಚಾಲಯದಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇದು ಹಾನಿಕಾರಕ ಚಟುವಟಿಕೆಯಾಗಿದೆ ಮತ್ತು ತೀವ್ರ ಆರೋಗ್ಯ ಕಾಯಿಲೆಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಪೈಲ್ಸ್ ಎಂದು ಕರೆಯಲ್ಪಡುವ ಮೂಲವ್ಯಾಧಿಯನ್ನು ತಪ್ಪಿಸಲು ಶೌಚಾಲಯದಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಕಾಲ ಕಳೆಯಬಾರದು ಎಂದು ಎನ್ಎಚ್ಎಸ್ ಶಸ್ತ್ರಚಿಕಿತ್ಸಕ ಡಾ. ಕರಣ್ ರಾಜನ್ ಎಚ್ಚರಿಸಿದ್ದಾರೆ. ವಿಡಿಯೋವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 10 ನಿಮಿಷಗಳಿಗಿಂತ ಹೆಚ್ಚು ಕಾಲ ಟಾಯ್ಲೆಟ್ ನಲ್ಲಿ ಕುಳಿತುಕೊಳ್ಳುವುದು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಗುದದ್ವಾರದ ಒಳಗೆ ಮತ್ತು ಸುತ್ತಲೂ ಹೆಮೊರೊಯಿಡ್‌ಗಳನ್ನು ಉಂಟುಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಸಂಡರ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಕ್ಲಿನಿಕಲ್ ಉಪನ್ಯಾಸಕ ಡಾ. ಕರಣ್, ಹೆಮೊರೊಯಿಡ್ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ನಿಮ್ಮ ಸಮಯವನ್ನು ಶೌಚಾಲಯದ ಕಮೋಡ್ ಮೇಲೆ ಕಳೆಯುವ ಸರಿಯಾದ ಮಾರ್ಗವನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವರ್ಷದ ಜುಲೈನಲ್ಲಿ ಅವರು ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.

ನಿಯಮಿತವಾಗಿ ವೈದ್ಯಕೀಯ ಸಲಹೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ವೈದ್ಯರು, ಹೆಮೊರೊಹಾಯಿಡ್ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಮೊದಲ ಸಲಹೆಯೊಂದಿಗೆ ವಿಡಿಯೋವನ್ನು ಪ್ರಾರಂಭಿಸುತ್ತಾರೆ. ನಿಮ್ಮ ಜೀವನದ ಹೆಚ್ಚಿನ ಸಮಯವನ್ನು ಶೌಚಾಲಯದಲ್ಲಿ ಕಳೆಯಬೇಡಿ ಎಂದು ಅವರು ಹೇಳುತ್ತಾರೆ. ಶೌಚಾಲಯದಲ್ಲಿ ಸರಾಸರಿ 10 ನಿಮಿಷಗಳಿಗಿಂತ ಹೆಚ್ಚು ಸಮಯ ಕಳೆಯದಿರಲು ಆದಷ್ಟು ಪ್ರಯತ್ನಿಸಿದ್ರೆ ಒಳಿತು. ಒಬ್ಬ ವ್ಯಕ್ತಿಯು ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆದ್ರೆ, ರಕ್ತವು ಈ ಗುದನಾಳದ ರಕ್ತನಾಳಗಳಲ್ಲಿ ಹೆಮೊರೊಯಿಡ್ಸ್ ಅನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಶೌಚಾಲಯದಲ್ಲಿರುವಾಗ ಆದಷ್ಟು ಆಯಾಸಗೊಳಿಸಬಾರದು ಎಂಬುದು ಅವರ ಎರಡನೇ ಸಲಹೆಯಾಗಿದೆ. ಹೆಮೊರೊಯಿಡ್ಸ್‌ನ ರಚನೆ ಪ್ರಕ್ರಿಯೆಯ ಗ್ರಾಫಿಕ್ ಅನ್ನು ತೋರಿಸುತ್ತಾ, ಶೌಚಾಲಯದ ಮೇಲೆ ಒತ್ತಡ ಹಾಕುವುದರಿಂದ ರಕ್ತನಾಳಗಳು ಊದಿಕೊಳ್ಳುತ್ತವೆ ಮತ್ತು ಹೆಮೊರೊಯಿಡ್ಸ್‌ಗೆ ಕಾರಣವಾಗುತ್ತವೆ ಎಂದು ಅವರು ಹೇಳುತ್ತಾರೆ.

ಇನ್ನು ತಮ್ಮ ಅಂತಿಮ ಸಲಹೆಯಲ್ಲಿ, ಪ್ರತಿಯೊಬ್ಬರೂ ಕೂಡ ಫೈಬರ್ ಭರಿತ ಆಹಾರವನ್ನು ಸೇವಿಸಬೇಕು. ನಮ್ಮ ದೇಹದಲ್ಲಿ ಏನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ ನಾರಿನಾಂಶ ಅದನ್ನು ನಿವಾರಿಸುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಟ 20ರಿಂದ 30 ಗ್ರಾಂನಷ್ಟು ಫೈಬರ್ ಭರಿತ ಆಹಾರ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...