alex Certify ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದವನ್ಯಾರು ಅಂತ ತಿಳಿದ್ರೆ ಶಾಕ್ ಆಗ್ತೀರಾ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದವನ್ಯಾರು ಅಂತ ತಿಳಿದ್ರೆ ಶಾಕ್ ಆಗ್ತೀರಾ……!

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಂಧಿತನಾಗಿರುವ ಯುವಕ ಐಐಟಿ ಪದವೀಧರ ಎಂದು ತಿಳಿದುಬಂದಿದೆ. ಈತ ನಕಲಿ ಹೆಸರಿನ ಮೂಲಕ ಆನ್​ಲೈನ್​​ನಲ್ಲಿ ಸಾಕಷ್ಟು ಟ್ರೋಲ್​ಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಕುಟುಂಬಸ್ಥರು ಹಾಗೂ ಸ್ನೇಹಿತರ ಪಾಲಿಗೆ ಈತ ಬುದ್ಧಿವಂತ ವ್ಯಕ್ತಿಯಾಗಿದ್ದು ಉನ್ನತ ಶಿಕ್ಷಣಕ್ಕೆ ಅಮೆರಿಕಕ್ಕೆ ತೆರಳುವ ಪ್ಲಾನ್​ನಲ್ಲಿದ್ದ ಎನ್ನಲಾಗಿದೆ.

23 ವರ್ಷದ ರಾಮ್​ ನಾಗೇಶ್​ ಶ್ರೀನಿವಾಸ್​ ಅಕುಬತಿನಿ ಸಾಫ್ಟ್​ವೇರ್ ಇಂಜಿನಿಯರ್​ ಆಗಿದ್ದು 1 ತಿಂಗಳ ಹಿಂದೆ ಬೆಂಗಳೂರಿನ ಪ್ರಮುಖ ಆಹಾರ ವಿತರಣಾ ಅಪ್ಲಿಕೇಶನ್​​ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಸ್ನಾತಕೋತ್ತರ ಪದವಿಗೆಂದು ಅಮೆರಿಕಕ್ಕೆ ತೆರಳುವವನಿದ್ದ ರಾಮ್​ ನಾಗೇಶ್​​ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಎನ್ನಲಾಗಿದೆ.

ಹೈದರಾಬಾದ್​ನಲ್ಲಿ ಬಂಧನಕ್ಕೊಳಗಾದ ರಾಮ್​ ನಾಗೇಶ್​ನನ್ನು ಮುಂಬೈನ ಲಾಕಪ್​ನಲ್ಲಿ ಇರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಮೆರಿಕದಲ್ಲಿ ಇರಬೇಕಿದ್ದ ಈತ ಸೋಶಿಯಲ್​ ಮೀಡಿಯಾದಲ್ಲಿ ಮಾಡಬಾರದ್ದನ್ನು ಮಾಡಿ ಜೈಲಿನ ಕಂಬಿ ಎಣಿಸುತ್ತಿದ್ದಾನೆ.

BIG NEWS: ಬಿಟ್ ಕಾಯಿನ್ ಅಂದ್ರೇನು…..?; ಅರ್ಥಶಾಸ್ತ್ರಜ್ಞರಾಗಿರುವ ಸಿದ್ದರಾಮಯ್ಯ ಮೊದಲು ಹೇಳಲಿ; ವಿಪಕ್ಷ ನಾಯಕನಿಗೆ ಸಂಸದ ಪ್ರತಾಪ್ ಸಿಂಹ ಸವಾಲು

10ನೇ ತರಗತಿಯಲ್ಲಿ ಟಾಪರ್​​ ಆಗಿದ್ದ ರಾಮ್​ ನಾಗೇಶ್​ ಓದುವುದರಲ್ಲಿ ತುಂಬಾನೇ ಮುಂದಿದ್ದ. ಹಗಲು ರಾತ್ರಿ ಎನ್ನದೇ ಓದುತ್ತಿದ್ದ ಈತ ಆನ್​ಲೈನ್​ನಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.

ಬಂಧಿತ ರಾಮ ನಾಗೇಶ್​, ಐಐಟಿ, ಜೆಇಇ ಪ್ರವೇಶಾತಿ ಪರೀಕ್ಷೆಯಲ್ಲಿ 2367ನೇ ರ್ಯಾಂಕ್​ ಸಂಪಾದಿಸಿದ್ದ. ಈತನಿಗೆ ಕಿರಿಯ ಸಹೋದರ ಕೂಡ ಇದ್ದಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ರಾಮ ನಾಗೇಶ್​​ನ ಇನ್ನೊಂದು ಮುಖದ ಬಗ್ಗೆ ಮನೆಯವರಿಗಾಗಲಿ, ಸ್ನೇಹಿತರಿಗಾಗಲಿ ಮಾಹಿತಿಯೇ ಇರಲಿಲ್ಲವಂತೆ..!
ಕುಟುಂಬಸ್ಥರು ಈತ ಕ್ರಿಕೆಟ್​ ಬಗ್ಗೆ ಆಸಕ್ತಿ ಹೊಂದಿದ್ದಾನೆ ಎಂಬುದರ ಬಗ್ಗೆ ಮಾತ್ರ ತಿಳಿದಿದ್ದರು. ಟಿ 20 ವರ್ಲ್ಡ್​ ಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ ಪದೇ ಪದೇ ಸೋತಾಗಲೂ ರಾಮ್​ ನಾಗೇಶ್​​ ಹತಾಶೆಗೆ ಒಳಗಾಗುತ್ತಿದ್ದನಂತೆ.

ರಾಮ್​ ನಾಗೇಶ್​ ಗಪ್ಪಿಸ್ತಾನ್ ರೇಡಿಯೋ ಎಂಬ ಟ್ವಿಟರ್​ ಖಾತೆಯನ್ನು ಹೊಂದಿದ್ದನು. ಇದೇ ಖಾತೆಯ ಮೂಲಕವೇ ಆತ ಕೊಹ್ಲಿ ವಿರುದ್ಧ ಟ್ವೀಟ್​ ಮಾಡಿದ್ದ. ಈಗ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಈ ಟ್ವೀಟ್​​ ವ್ಯಾಪಕವಾಗಿ ವೈರಲ್​ ಆಗುತ್ತಿದ್ದಂತೆಯೇ ರಾಮ್​ ನಾಗೇಶ್​ ತನ್ನ ಖಾತೆಯನ್ನು ಡಿ ಆ್ಯಕ್ಟಿವೇಟ್​ ಮಾಡಿದ್ದ. ತಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ತಿಳಿಯುತ್ತಿದ್ದಂತೆ ಭಯಗೊಂಡ ರಾಮ್​ ನಾಗೇಶ್​ ತನ್ನ ಇನ್ನೆರಡು ಖಾತೆಯನ್ನೂ ಡಿಲೀಟ್​ ಮಾಡಿದ್ದ. ಆದರೆ ಅಷ್ಟರಲ್ಲಾಗಲೇ ವಿರಾಟ್​ ಕೊಹ್ಲಿ ಮ್ಯಾನೇಜರ್​ ಈ ಟ್ವೀಟ್​ ಸಂಬಂಧ ಮುಂಬೈ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಮ್​ ನಾಗೇಶ್​ ಟ್ವಿಟರ್​ ಖಾತೆ ಡಿಲೀಟ್​ ಮಾಡಿದ್ದರೂ ಟ್ವೀಟ್​ನ ಸ್ಕ್ರೀನ್​ಶಾಟ್​ ವ್ಯಾಪಕವಾಗಿ ವೈರಲ್​ ಆಗಿತ್ತು. ಟ್ವಿಟರ್​ ಖಾತೆಯ ಹೆಸರನ್ನು ಬದಲಾವಣೆ ಮಾಡಿದರೂ ಸಹ ಪೊಲೀಸರು ರಾಮ್​ನಾಗೇಶ್​ ಟ್ವಿಟರ್​ ಖಾತೆಯನ್ನು ಟ್ರ್ಯಾಕ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...