alex Certify ಹಿಮಾಚಲ ಪ್ರದೇಶದಲ್ಲಿ ಐಸ್ ಕ್ರೀಂ ಸವಿದ ಶಿಲ್ಪಾ ಶೆಟ್ಟಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಾಚಲ ಪ್ರದೇಶದಲ್ಲಿ ಐಸ್ ಕ್ರೀಂ ಸವಿದ ಶಿಲ್ಪಾ ಶೆಟ್ಟಿ…..!

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ವಾರವಿಡೀ ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸಿದ್ರೆ, ವಾರಾಂತ್ಯದಲ್ಲಿ ಸಿಹಿ-ತಿಂಡಿಗಳನ್ನು ಸವಿಯುತ್ತಾರೆ. ಆದರೆ, ಈ ಬಾರಿ ಅವರ ಭಾನುವಾರದ ಭೋಜನ ಬಹಳ ವಿಶೇಷವಾಗಿತ್ತು.

ಶಿಲ್ಪಾ ಶೆಟ್ಟಿ ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಿಹಾರ ಮಾಡುತ್ತಿದ್ದಾರೆ. ಮತ್ತು ಅವರ ಭಾನುವಾರದ ಊಟದ ಜೊತೆಗೆ ಸಿಹಿ ಭಕ್ಷ್ಯ ಒಳಗೊಂಡಿತ್ತು. ಅಂದಹಾಗೆ ಅವರು ಆನಂದಿಸಿದ್ದು ರುಚಿಯಾದ ಐಸ್ ಕ್ರೀಂ ಅನ್ನು. ಇನ್ಸ್ಟಾಗ್ರಾಂನಲ್ಲಿ ಈ ಫೋಟೋವನ್ನು ಶಿಲ್ಪಾಶೆಟ್ಟಿ ಪೋಸ್ಟ್ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ಇತ್ತೀಚಿನ ದಿನಗಳಲ್ಲಿ ಸಿಹಿ ತಿಂಡಿಯತ್ತ ಮಾರು ಹೋಗಿದ್ದಾರೆ. ಕೆಲವು ದಿನಗಳ ಹಿಂದೆ, ಅವರು ತಾಜಾ ರಸಗುಲ್ಲಾಗಳನ್ನು ಆನಂದಿಸಿದ್ದರು. ಸಾಮಾನ್ಯವಾಗಿ ಭಾನುವಾರದಂದು ಶಿಲ್ಪಾ ಸಿಹಿ ತಿನ್ನುವುದನ್ನು ನಾವು ನೋಡುತ್ತೇವೆ. ಆದರೆ ಈ ಬಾರಿ ಭಾನುವಾರ ಮಾತ್ರವಲ್ಲದೆ ಬೇರೆ ದಿನಗಳಲ್ಲಿ ಕೂಡ ಸಿಹಿ-ತಿಂಡಿಗಳತ್ತ ಆಕರ್ಷಿತರಾಗಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಕೆಲವು ರುಚಿಕರವಾದ ರಸಗುಲ್ಲಾಗಳನ್ನು ಸೇವಿಸಿದ್ದಾರೆ.

ಅಷ್ಟೇ ಅಲ್ಲ, ರಸಗುಲ್ಲಾ ತಿನ್ನುವ ವಿಡಿಯೋ ಹಂಚಿಕೊಂಡ ಶಿಲ್ಪಾ, ಇವತ್ತು ಭಾನುವಾರವಲ್ಲ, ಶುಕ್ರವಾರ.. ಆದರೂ ತಾನು ರಸಗುಲ್ಲಾ ಸೇವಿಸುತ್ತಿದ್ದೇನೆ. ಯಾಕೆಂದ್ರೆ ದೀಪಾವಳಿಯಲ್ವಾ.. ಹಬ್ಬ ಆಚರಿಸಿದ ನಂತರ ತಾಲೀಮು ಮಾಡಿದರಾಯ್ತು ಎಂಬುದಾಗಿ ಪೋಸ್ಟ್ ನಲ್ಲಿ ಬರೆದಿದ್ದಾರೆ.

ದೀಪಾವಳಿಯಂದು ಶಿಲ್ಪಾ ತಮ್ಮ ಮನೆಯಲ್ಲಿ ತರಹೇವಾರಿ ಸಿಹಿ-ತಿಂಡಿಗಳನ್ನು ತಯಾರಿಸಿದ್ದಾರೆ. ಶಂಕರಪಾರ, ಕರಂಜಿ, ಸೇವ್, ಕಾಜು ಕಟ್ಲಿ, ಬೆಸನ್ ಬರ್ಫಿ ಇತ್ಯಾದಿ ಸಿಹಿಖಾದ್ಯಗಳ ಫೋಟೋ ಹಂಚಿಕೊಂಡಿದ್ದಾರೆ. ಬೇಸನ್ ಬರ್ಫಿ ಶಿಲ್ಪಾ ಶೆಟ್ಟಿಗೆ ಬಹಳ ಅಚ್ಚುಮೆಚ್ಚಿನ ಸಿಹಿ ತಿನಿಸಂತೆ.

https://www.instagram.com/p/CV5FdMnBHR6/

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...