alex Certify BIG NEWS: ವಿಶ್ವದ ಘಟಾನುಘಟಿಗಳನ್ನೆಲ್ಲಾ ಹಿಂದಿಕ್ಕಿದ ಮೋದಿ ಜನ ಮೆಚ್ಚುಗೆಯ ಅಗ್ರ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವದ ಘಟಾನುಘಟಿಗಳನ್ನೆಲ್ಲಾ ಹಿಂದಿಕ್ಕಿದ ಮೋದಿ ಜನ ಮೆಚ್ಚುಗೆಯ ಅಗ್ರ ನಾಯಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೇ.70 ರಷ್ಟು ಜನಮನ್ನಣೆ ಪಡೆದು ವಿಶ್ವದ ಅತ್ಯಂತ ಮೆಚ್ಚುಗೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಿ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮಾಹಿತಿ ನೀಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಮೆಚ್ಚುಗೆ ಪಡೆದ ವಿಶ್ವ ನಾಯಕರಾಗಿ ಮುಂದುವರೆದಿದ್ದಾರೆ. ಶೇಕಡ 70 ರಷ್ಟು ಅನುಮೋದನೆಯೊಂದಿಗೆ ಅವರು ಮತ್ತೊಮ್ಮೆ ಜಾಗತಿಕ ನಾಯಕರಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ 13 ಜಾಗತಿಕ ನಾಯಕರಲ್ಲಿ ಅತಿಹೆಚ್ಚು ಜನರಿಂದ ಅನುಮೋದನೆ ಪಡೆದಿದ್ದಾರೆ. ಸಮೀಕ್ಷೆಯ ಪ್ರಕಾರ, ಪ್ರಧಾನಿ ಮೋದಿ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್, ಇಟಾಲಿಯನ್ ಪ್ರಧಾನಿ ಮಾರಿಯೋಗಿಂತ ಮುಂದಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಯುಎಸ್ ಅಧ್ಯಕ್ಷ ಜೋ ಬಿಡನ್ ಅವರಿಗಿಂತಲೂ ಮೋದಿ ಮುಂದಿದ್ದಾರೆ.

ಪಟ್ಟಿಯಲ್ಲಿ ಆಸ್ಟ್ರೇಲಿಯನ್ ಪಿಎಂ ಸ್ಕಾಟ್ ಮಾರಿಸನ್, ಕೆನಡಾ ಪಿಎಂ ಟ್ರುಡೊ, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮುಂತಾದವರು ಸಹ ಇದ್ದಾರೆ. ಈ ಪಟ್ಟಿಯಲ್ಲಿ ಮೋದಿ ಹೆಚ್ಚು ಮೆಚ್ಚುಗೆ ಪಡೆದ ನಾಯಕರ ಪಟ್ಟಿಯಲ್ಲಿ 70 ಶೇಕಡ ಅನುಮೋದನೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಜಾಗತಿಕ ನಾಯಕರಿಗೆ ಹೋಲಿಸಿದರೆ ಪ್ರಧಾನಿ ಮೋದಿಯವರ ಅನುಮೋದನೆಯ ರೇಟಿಂಗ್ ಇಲ್ಲಿದೆ:

1.ನರೇಂದ್ರ ಮೋದಿ: ಶೇ. 70

  1. ಲೋಪ್ ಒಬ್ರೇಡರ್: ಶೇ. 66
  2. ಮಾರಿಯೋ ಡ್ರಾಘಿ: ಶೇ. 58
  3. ಏಂಜೆಲಾ ಮರ್ಕೆಲ್: ಶೇ. 54
  4. ಸ್ಕಾಟ್ ಮಾರಿಸನ್: ಶೇ. 47
  5. ಜಸ್ಟಿನ್ ಟ್ರುಡೊ: ಶೇ. 45
  6. ಜೋ ಬಿಡೆನ್: ಶೇ. 44
  7. ಫ್ಯೂಮಿಯೊ ಕಿಶಿಡಾ: ಶೇ. 42
  8. ಮೂನ್ ಜೇ-ಇನ್: ಶೇ. 41
  9. ಬೋರಿಸ್ ಜಾನ್ಸನ್: ಶೇ. 40
  10. ಪೆಡ್ರೊ ಸ್ಯಾಂಚೆಜ್: ಶೇ. 37
  11. ಎಮ್ಯಾನುಯೆಲ್ ಮ್ಯಾಕ್ರನ್: ಶೇ. 36
  12. ಜೈರ್ ಬೋಲ್ಸನಾರೊ: ಶೇ. 35

ಪ್ರತಿ ದೇಶದ ವಯಸ್ಕರೊಂದಿಗಿನ ಸಂದರ್ಶನಗಳ ಆಧಾರದ ಮೇಲೆ ಅನುಮೋದನೆ ಮತ್ತು ಅಸಮ್ಮತಿ ರೇಟಿಂಗ್ ಅನ್ನು ಮಾರ್ನಿಂಗ್ ಕನ್ಸಲ್ಟ್ ನಿರ್ಧರಿಸುತ್ತದೆ. ಈ ಅಂಕಿ ಅಂಶವನ್ನು ಸಿದ್ಧಪಡಿಸಲು, ಮಾರ್ನಿಂಗ್ ಕನ್ಸಲ್ಟ್ ಭಾರತದಲ್ಲಿ 2,126 ಜನರನ್ನು ಆನ್‌ಲೈನ್‌ನಲ್ಲಿ ಸಂದರ್ಶಿಸಿದೆ.

ಅಮೇರಿಕನ್ ದತ್ತಾಂಶ ಗುಪ್ತಚರ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಉನ್ನತ ನಾಯಕರಿಗೆ ಅನುಮೋದನೆ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡಿದೆ. ಗುಪ್ತಚರ ಸಂಸ್ಥೆಯ ಪ್ರಕಾರ, ಅದರ ರೇಟಿಂಗ್ ಪ್ರತಿ ದೇಶದ ವಯಸ್ಕ ನಿವಾಸಿಗಳ 7 ದಿನಗಳ ಬದಲಾಗುತ್ತಿರುವ ಸರಾಸರಿಯನ್ನು ಆಧರಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...