alex Certify ಗರಿಗರಿಯಾಗಿ ತಯಾರಿಸಿ ಚಟ್ಟಂಬಡೆ(ಮಸಾಲಾ ವಡೆ) | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರಿಗರಿಯಾಗಿ ತಯಾರಿಸಿ ಚಟ್ಟಂಬಡೆ(ಮಸಾಲಾ ವಡೆ)

ಬೇಕಾಗುವ ಸಾಮಗ್ರಿ : ಕಡ್ಲೆ ಬೇಳೆ – 1/2 ಕಪ್​, ಉದ್ದಿನ ಬೇಳೆ – 1 ದೊಡ್ಡ ಚಮಚ,ಈರುಳ್ಳಿ – 1/4, ಹಸಿ ಮೆಣಸಿನ ಕಾಯಿ – 1, ಒಣ ಮೆಣಸು – 2, ಕೊತ್ತಂಬರಿ ಸೊಪ್ಪು – ಸ್ವಲ್ಪ, ಶುಂಠಿ – ಸ್ವಲ್ಪ, ಇಂಗು – ಸ್ವಲ್ಪ, ಕರಿಬೇವು – 1 ಎಸಳು, ಎಣ್ಣೆ – 1 ಕಪ್​, ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಒಂದು ಪಾತ್ರೆಯನ್ನು ತೆಗೆದುಕೊಳ್ಳಿ, ಇದಕ್ಕೆ ಕಡ್ಲೆಬೇಳೆ, ಉದ್ದಿನ ಬೇಳೆ ಹಾಗೂ ಒಣಮೆಣಸನ್ನು ಹಾಕಿ 1 ಗಂಟೆಗಳ ಕಾಲ ನೆನೆಯಲು ಬಿಡಿ. ಇದಾದ ಬಳಿಕ ನೀರನ್ನು ತೆಗೆದು ಇನ್ನೂ ಐದು ನಿಮಿಷಗಳ ಕಾಲ ಹಾಗೆಯೇ ಇಡಿ. ಇದಕ್ಕೆ ಸ್ವಲ್ಪವೇ ಪ್ರಮಾಣದಲ್ಲಿ ನೀರನ್ನು ಸೇರಿಸಿ ರುಬ್ಬಿಕೊಳ್ಳಿ.

ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿಯೊಂದಿಗೆ ಪವರ್ ಸ್ಟಾರ್ ಪುನೀತ್ ಗೆ ನಮನ

ಈ ಪೇಸ್ಟ್​​ಗೆ, ಸಣ್ಣಗೆ ಕತ್ತರಿಸಿದ ಮೆಣಸಿನಕಾಯಿ, ತುರಿದ ಶುಂಠಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಇಂಗು, ಕರಿಬೇವು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಿಸಿ. ನಿಮ್ಮ ಕೈಗೆ ಎಣ್ಣೆಯನ್ನು ಸವರಿಕೊಂಡು ಆ ಹಿಟ್ಟನ್ನು ವಡೆಯ ಆಕಾರಕ್ಕೆ ತಂದುಕೊಳ್ಳಿ.

ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಕಾಯಲು ಬಿಡಿ. ಇದಕ್ಕೆ ಸಣ್ಣದಾಗಿ ಮಾಡಿಕೊಂಡ ವಡೆಗಳನ್ನು ಹಾಕಿ ಹೊಂಬಣ್ಣ ಬರುವವರೆಗೂ ಕರಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...