ಆಹಾರ ವಿತರಣಾ ಸಂಸ್ಥೆಗಳು ಕಾಲಿಟ್ಟ ನಂತರ ಊಟ ಮಾಡಲು ಹೋಟೆಲ್ ಗೆ ಹೋಗಬೇಕೆಂದಿಲ್ಲ. ನಮಗೆ ಬೇಕಿರೋ ಖಾದ್ಯ ನಮ್ಮ ಮನೆಗೆ ಬಂದು ತಲುಪುತ್ತದೆ. ಆದರೆ, ಇಲ್ಲೊಬ್ಬಳು ಮಹಿಳೆ ಊಬರ್ ಈಟ್ಸ್ ನಿಂದ ಆರ್ಡರ್ ಮಾಡಿದ್ದ ಆಹಾರ ಆಕೆಗೆ ತಲುಪದೆ ಪೊದೆಗೆ ಸೇರಿದ ಘಟನೆ ನಡೆದಿದೆ.
ಹೌದು, 39 ವರ್ಷದ ಮಹಿಳೆಯೊಬ್ಬಳು ತನ್ನ ಮಕ್ಕಳು ಹಾಗೂ ಸ್ನೇಹಿತನಿಗಾಗಿ ಮ್ಯಾಕ್ಡೊನಾಲ್ಡ್ನಿಂದ ಹ್ಯಾಪಿ ಮೀಲ್ಸ್ ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ಬಳಿಕ ತನ್ನ ಸ್ನೇಹಿತನ ಮನೆಯ ವಿಳಾಸ ಊಬರ್ ಈಟ್ಸ್ ನಲ್ಲಿ ಸೇವ್ ಆಗಿರುವುದನ್ನು ಗಮನಿಸಿದ್ದಾಳೆ. ಕೂಡಲೇ ಊಬರ್ ಈಟ್ಸ್ ಚಾಲಕನಿಗೆ ವಿಷಯ ತಿಳಿಸಿದ್ದಾಳೆ.
BIG NEWS: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ
ಆದರೆ, ಊಬರ್ ಈಟ್ಸ್ ಚಾಲಕ ಅದಕ್ಕಾಗಿ ಹಣ ಪಡೆದಿಲ್ಲ ಎಂದು ಹೇಳಿ ಆಹಾರವನ್ನು ಪೊದೆಯಲ್ಲಿ ಎಸೆದು ಅದರ ಫೋಟೋವನ್ನು ಮಹಿಳೆಗೆ ಕಳುಹಿಸಿದ್ದಾನೆ. ಇದರಿಂದ ಕಂಗಾಲಾದ ಮಹಿಳೆ, ಮಳೆಯ ಮಧ್ಯೆ ತನ್ನ ಮಕ್ಕಳನ್ನು ಕರೆದುಕೊಂಡು ಚಾಲಕ ಆಹಾರ ಎಸೆದಿರುವ ಸ್ಥಳಕ್ಕೆ ಹೋದರೂ ಪತ್ತೆಯಾಗಿಲ್ಲ.
ಬೇಸರದಿಂದ ಮನೆಗೆ ಮರಳಿದ ಮಹಿಳೆ ಊಬರ್ ಈಟ್ಸ್ ಸಂಪರ್ಕಿಸಿದಾಗ, ಅದು ಚಾಲಕನ ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದ್ದಲ್ಲದೆ, ಹಣವನ್ನು ಮರುಪಾವತಿ ಮಾಡಿಲ್ಲ. ನಂತರ ಘಟನೆಯ ಬಗ್ಗೆ ದೂರು ನೀಡಿದ ಬಳಿಕ ಊಬರ್ ಈಟ್ಸ್ ಮಹಿಳೆಯ ಹಣವನ್ನು ಹಿಂತಿರುಗಿಸಿದೆ.