ನವದೆಹಲಿ: ಪ್ರತಿವರ್ಷದಂತೆ ಈ ವರ್ಷವೂ ಪ್ರಧಾನಿ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಇಂದು ಜಮ್ಮು ಮತ್ತು ಕಾಶ್ಮೀರದ ನೌಶೇರಾ ಮತ್ತು ರಜೌರಿ ಗಡಿಗೆ ಪ್ರಧಾನಿ ತೆರಳಲಿದ್ದಾರೆ.
2014ರಲ್ಲಿ ಪ್ರಧಾನಿಯಾದ ನಂತರ ಮೋದಿ ಪ್ರತಿವರ್ಷ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ. ಈ ವರ್ಷ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ನೌಶೇರಾ ಮತ್ತು ರಜೌರಿ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.
ಕಳೆದ ವರ್ಷ ರಾಜಸ್ಥಾನದ ಜೈಸಲ್ಮೇರ್ ಲೋಂಗೇವಾಲಾ ಗಡಿಯಲ್ಲಿ ಅವರು ದೀಪಾವಳಿ ಆಚರಿಸಿದ್ದರು.