ಅಪ್ರಾಪ್ತ ಪ್ರಯಾಣಿಕರ ಪ್ರಯಾಣ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಬೈಕ್ಗಳ ವೇಗಕ್ಕೆ ಮಿತಿಯ ಮೇಲೆ ಕಡಿವಾಣ ಹಾಕುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಟೀಂ ಇಂಡಿಯಾದ ಈ ಆಟಗಾರನಿಗೆ ಕೊನೆಯಾಗಲಿದೆ ಟಿ-20 ವಿಶ್ವಕಪ್…..?
ನಾಲ್ಕು ವರ್ಷದವರೆಗಿನ ಮಕ್ಕಳನ್ನು ಮೋಟಾರ್ ಸೈಕಲ್ನಲ್ಲಿ ಕರೆದುಕೊಂಡು ಹೋಗುವ ವೇಳೆ ಬೈಕ್ಗಳ ವೇಗದ ಮಿತಿ ಪ್ರತಿ ಗಂಟೆಗೆ 40 ಕಿ.ಮೀ. ದಾಟುವಂತಿಲ್ಲ ಹಾಗೂ 9 ತಿಂಗಳಿನಿಂದ 4 ವರ್ಷ ಪ್ರಾಯದ ಮಕ್ಕಳು ಕ್ರ್ಯಾಶ್ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬುದರ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಸಚಿವಾಲಯವು ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, 4 ವರ್ಷದ ಒಳಗಿನ ಮಗುವನ್ನು ಮೋಟಾರ್ ಬೈಕಿನಲ್ಲಿ ಸಾಗಿಸುವ ವೇಳೆ ವೇಗದ ಮಿತಿ ಗಂಟೆಗೆ 40 ಕಿಲೋಮೀಟರ್ ಮೀರಬಾರದು. ಅಲ್ಲದೇ 9 ತಿಂಗಳಿನಿಂದ 4 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಕ್ರ್ಯಾಶ್ ಹೆಲ್ಮೆಟ್ ಹಾಕಿಸಬೇಕು ಎಂದು ಸಚಿವಾಲಯ ಹೇಳಿದೆ.
ಕೆರೆಯಲ್ಲಿ ಈಜಲು ಹೋದವನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್
ಮಕ್ಕಳು ಧರಿಸುವ ಈ ಸುರಕ್ಷತಾ ಸರಂಜಾಮು ಕೋಟ್ ರೀತಿಯಲ್ಲಿ ಇರಲಿದ್ದು ಇದನ್ನು ಮಗುವಿನ ಅಳತೆಗೆ ತಕ್ಕಂತೆ ಸರಿಹೊಂದಿಸಬಹುದಾಗಿದೆ. ಈ ಧಿರಿಸಿಗೆ ಅಳವಡಿಸಲಾದ ಪಟ್ಟಿಗಳನ್ನು ಚಾಲಕ ಧರಿಸಬೇಕು. ಈ ಮೂಲಕ ಮಗು ಬೈಕ್ನಲ್ಲಿ ಸುರಕ್ಷಿತವಾಗಿ ಇರಲಿದೆ ಎಂದು ಸಚಿವಾಲಯ ವಿವರಿಸಿದೆ.