ಬಾಂಗ್ಲಾದೇಶದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳ ಮನೆಗಳನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯವೆಸಗಿದ್ದಾರೆ.
ಕಳೆದ ವಾರ ದುರ್ಗಾ ಪೂಜಾ ಸಂಭ್ರಮದ ವೇಳೆ ದಂಗೆಕೋರರು 29 ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಈ ಎಲ್ಲಾ ಮನೆಗಳೂ ಅಲ್ಲಿನ ಹಿಂದೂ ಅಲ್ಪಸಂಖ್ಯಾತರಿಗೆ ಸೇರಿದ್ದಾಗಿವೆ. ದೇವಸ್ಥಾನವೊಂದರ ಧ್ವಂಸದ ವಿರುದ್ಧ ಹಿಂದೂ ಸಮುದಾಯದ ಪ್ರತಿಭಟನೆ ನಡೆಸಿದ ನಡುವೆಯೇ ಈ ದುಷ್ಕೃತ್ಯ ಜರುಗಿದೆ. ರಂಗ್ಪುರ ಜಿಲ್ಲೆಯ ಪೀರ್ಗಂಜ್ ಎಂಬ ಊರಿನಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಇಡಲಾಗಿದೆ.
ಹಿಂದೂ ಯುವಕನೊಬ್ಬನಿಂದ ಧರ್ಮಕ್ಕೆ ಅಪಮಾನವಾಗಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ನೆರೆದು, ನಿಯಂತ್ರಣಕ್ಕೆ ಸಿಗದ ಜನಸಮೂಹ ಹೀಗೆ ಬೆಂಕಿ ಹಚ್ಚಿದೆ ಎಂದು ರಂಗ್ಪುರ ಎಸ್ಪಿ ಮೊಹಮ್ಮದ್ ಕಮರುಜಮ್ಮನ್ ತಿಳಿಸಿದ್ದಾರೆ.
ದಾಳಿಯ ಬಳಿಕ, ಸಾಮಾಜಿಕ ಜಾಲತಾಣದ ಮೂಲಕ ಕೋಮು ದ್ವೇಷ ಬಿತ್ತುತ್ತಿರುವ ಆಪಾದನೆ ಮೇಲೆ ಬಹಳಷ್ಟು ಮಂದಿಯನ್ನು ಬಂಧಿಸಲಾಗಿದೆ.