ತುಮಕೂರು: ಬಿಜೆಪಿ ಜಿಲ್ಲಾ ಘಟಕದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಶಾಸಕರನ್ನು ಕಡೆಗಣಿಸಿ, ಪಕ್ಷ ವಿರೋಧಿಗಳಿಗೆ ಮಣೆ ಹಾಕಲಾಗುತ್ತಿದೆ ಎಂದು ತುರುವೆಕೆರೆ ಶಾಸಕ ಮಸಾಲೆ ಜಯರಾಂ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ನಾಯಕರ ವಿರುದ್ಧ ಗರಂ ಆಗಿರುವ ಜಯರಾಂ, ಹಳೆಯ ಬಿಜೆಪಿ ಕಾರ್ಯಕರ್ತರಿಗೆ ಮಹತ್ವ ಸಿಗುತ್ತಿಲ್ಲ, ಪರಿವರ್ತನಾ ರ್ಯಾಲಿ ವೇಳೆ ಕಲ್ಲು ತೂರಾಟ ನಡೆಸಿದವರಿಗೆ, ಭಾರತ ಮಾತೆ ಫೋಟೋಗೆ ಬೆಂಕಿ ಹಚ್ಚಿದವರಿಗೆ ಜಿಲ್ಲಾ ಸಮಿತಿಯಲ್ಲಿ ಸ್ಥಾನಮಾನ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಬೇರೆ ರೀತಿ ರಾಜಕಾರಣ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
30 ವರ್ಷಗಳಿಂದ ದಸರಾ ಆಟಿಕೆ ಪ್ರದರ್ಶನ ಆಯೋಜಿಸುತ್ತಿದೆ ಹುಬ್ಬಳ್ಳಿಯ ಈ ಕುಟುಂಬ
ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಆದರೆ ನನ್ನ ವಿರುದ್ಧ ಕೆಲಸ ಮಾಡಿದವರನ್ನು, ನನ್ನ ವಿರುದ್ಧ ಮತ ಹಾಕಿದವರನ್ನು ನನ್ನ ಮೇಲೆ ಕೂರಿಸಿದರೆ ನನಗೆ ಹೇಗಾಗಬೇಕು? ಪಕ್ಷ ವಿರೋಧಿಗಳಿಗೆ ಸ್ಥಾನಮಾನ ನೀಡುತ್ತಿರುವುದು ಸರಿಯಲ್ಲ ಎಂದು ಹಿರಿಯರ ಗಮನಕ್ಕೆ ತಂದರೂ ಯಾರೊಬ್ಬರೂ ಗಮನಿಸುತ್ತಿಲ್ಲ. ಶಾಸಕರಾದ ನಮ್ಮನ್ನು ಕಡೆಗಣಿಸಿ ವಿರೋಧಿಗಳಿಗೆ ಬೆಂಬಲ ನೀಡಿ ಬೋರ್ಡ್ ಮೆಂಬರ್ ಮಾಡಿದ್ದಾರೆ. ಇಂತಹ ಅಸಮಾಧಾನದಿಂದಲೇ ಮಾಜಿ ಶಾಸಕ ಸುರೇಶ್ ಗೌಡ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.