ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಮೋದಿಸಿದೆ.
ಇಲಾಖೆಯ ಈ ನಿರ್ಧಾರದಿಂದ 1,984.73 ಕೋಟಿ ರೂಗಳ ವೆಚ್ಚವಾಗಲಿದೆ. ಈ ಲೆಕ್ಕಾಚಾರದಡಿ, ಅರ್ಹ ನೌಕರರಿಗೆ ನೀಡಬಹುದಾದ ಬೋನಸ್ 7,000/ತಿಂಗಳಿನಷ್ಟಿದ್ದು, 78 ದಿನಗಳ ಮಟ್ಟಿಗೆ ಗರಿಷ್ಠ 17,951ರೂಗಳನ್ನು ಪಾವತಿಸಬಹುದಾಗಿದೆ.
PUC ಪಾಸಾದವರಿಗೆ 20 ಸಾವಿರ, ಪದವೀಧರರಿಗೆ 25, ಪಿಜಿ ಆದವರಿಗೆ 30 ಸಾವಿರ ರೂ. ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಈ ನಿರ್ಧಾರದಿಂದಾಗಿ ಇಲಾಖೆಯ 11.56 ಲಕ್ಷದಷ್ಟು ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಪ್ರತಿ ವರ್ಷ ದಸರಾ/ದೀಪಾವಳಿ ಸಂಭ್ರಮದ ವೇಳೆ ಈ ಬೋನಸ್ ಪಾವತಿಯ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವರ್ಷದ ಹಬ್ಬದ ರಜೆಗಳು ಆರಂಭಗೊಳ್ಳುವ ಮುನ್ನ ಸಂಪುಟದ ಮೇಲ್ಕಂಡ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಲಾಗುವುದು.
ಆರ್‌ಪಿಎಫ್ ಹಾಗೂ ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ, ದೇಶಾದ್ಯಂತ ಇರುವ ರೈಲ್ವೇ ಇಲಾಖೆಯ ಎಲ್ಲಾ ಗೆಜ಼ೆಟೇತರ ನೌಕರರನ್ನು ಪ್ರದರ್ಶನಾಧಾರಿತ ಬೋನಸ್ ಒಳಗೊಳ್ಳುತ್ತದೆ.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಸರ್ಕಾರದಿಂದ ಸಿಹಿ ಸುದ್ದಿ: ಕಾಯ್ದೆ ಮೂಲಕ ಆಧ್ಯಾದೇಶ
ಕೋವಿಡ್ ಸಂದರ್ಭದಲ್ಲಿ ದೇಶಾದ್ಯಂತ ವಿಶೇಷ ಕರ್ತವ್ಯ ನಿರ್ವಹಿಸಿದ್ದ ರೈಲ್ವೆ ಇಲಾಖೆ ವಿಶ್ವದ ಗಮನ ಸೆಳೆದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.