ಮಂಗಳೂರು: ಮಗನ ಮೇಲೆ ಅಪ್ಪನೇ ಗುಂಡಿನ ದಾಳಿ ನಡೆಸಿರುವ ಘಟನೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಬಳಿ ನಡೆದಿದೆ.
ತಂದೆ ರಾಜೇಶ್ ಪ್ರಭು 14 ವರ್ಷದ ಬಾಲಕ ಸುಧೀಂದ್ರ ಪ್ರಭು ಮೇಲೆ ಫೈರಿಂಗ್ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತಿದ್ದುಪಡಿ; ಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ
ಸಂಬಳ ಕೇಳಿದ ವಿಚಾರವಾಗಿ ನೌಕರರ ಜೊತೆ ರಾಜೇಶ್ ಪ್ರಭು ವಾಗ್ವಾದಕ್ಕಿಳಿದಿದ್ದ. ಕೋಪದ ಬರದಲ್ಲಿ ರಾಜೇಶ್ ನೌಕರರ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾರೆ. ನೌಕರರ ಮೇಲೆ ಗುರಿಯಿಟ್ಟ ಗುಂಡು ಮಗ ಸುದೀಂದ್ರನಿಗೆ ತಗುಲಿದೆ. ಗುಂಡೇಟಿಗೆ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.