ಶಿವಮೊಗ್ಗ: ಮೇಲಾಧಿಕಾರಿ ಕೆಲಸದ ಒತ್ತಡ ತಾಳಲಾರದೇ ಆತ್ಮಹತ್ಯೆಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎಫ್.ಡಿ.ಸಿ. ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಎಫ್.ಡಿ.ಸಿ. ಗಿರೀಶ್ ನಾಪತ್ತೆಯಾಗಿರುವ ಸಿಬ್ಬಂದಿ. ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದಾರೆ. ಹಗಲು ರಾತ್ರಿ ಕೆಳಹಂತದ ನೌಕರರು ಕೆಲಸ ಮಾಡುತ್ತಿದ್ದೇವೆ. ಮೇಲಾಧಿಕಾರಿಗಳು ಮಾತ್ರ ನಮ್ಮ ಜೊತೆ ಸರಿಯಾಗಿ ವರ್ತಿಸುತ್ತಲೂ ಇಲ್ಲ. ನನ್ನನ್ನು ಯಾರೂ ಹುಡುಕುವ ಪ್ರಯತ್ನ ಮಾಡಬೇಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳಲು ತೆರಳುತ್ತಿದ್ದೇನೆ. ನನ್ನ ಸಾವಿಗೆ ಹಿರಿಯ ಅಧಿಕಾರಿಯೋರ್ವರು ಕಾರಣ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ʼಬಿಗ್ ಬಾಸ್ʼ ವಿಜೇತೆಯ ಫೋಟೋ ನೋಡಿ ಅಭಿಮಾನಿಗಳು ಕಂಗಾಲು
ಕುಟುಂಬದವರು ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಪತ್ತೆಯಾಗಿರುವ ಗಿರೀಶ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಾಸಕರ ಮತ್ತು ಸಂಸದರ ಅನುದಾನ ಬಿಡುಗಡೆಯಾಗದ ಕಾರಣ ಹಣ ಬಿಡುಗಡೆಗೆ ಶಾಸಕರು ಹಾಗೂ ಗುತ್ತಿಗೆದಾರರಿಂದ ಗಿರೀಶ್ ಮೇಲೆ ಒತ್ತಡವಿತ್ತು ಎನ್ನಲಾಗಿದೆ.