ಕೊರೊನಾ ಸಾಂಕ್ರಾಮಿಕದ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ದೇಶವೇ ಸಿಕ್ಕಿರುವಾಗ ಇನ್ನು ಬಡ ಮತ್ತು ಮಧ್ಯಮ ವರ್ಗದ ಕುಟುಂಬಸ್ಥರು ಪರಿಸ್ಥಿತಿ ಹೇಳತೀರದು. ಬಹುತೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಮಾಸಿಕ ಆದಾಯವೇ ಇಲ್ಲದೆಯೇ ಮನೆಯಲ್ಲೇ ಕೂರುವಂತಾಗಿದೆ. ಊಟದ ವ್ಯವಸ್ಥೆಗೆ ಸಿಕ್ಕ ಸಿಕ್ಕ ಕೆಲಸಗಳನ್ನೇ ಆಶ್ರಯಿಸುವಂತಾಗಿದೆ. ಇಂಥ ಸಂದರ್ಭದಲ್ಲಿಮಕ್ಕಳ ಶಾಲಾ ಶಿಕ್ಷ ಣದ ಬಗ್ಗೆ ಪೋಷಕರು ತಲೆಕೆಡಿಸಿಕೊಳ್ಳುವಷ್ಟು ಸಮಾಧಾನವಾಗಿ ಉಳಿದಿಲ್ಲ.
ಪರಿಣಾಮ ಸಾವಿರಾರು ಮಕ್ಕಳು ಶಾಲೆಯನ್ನೇ ತೊರೆದು ಮನೆಯಲ್ಲೇ ಉಳಿಯುವಂತಾಗಿದೆ. ಮತ್ತೆ ಕೆಲವು ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಗಂಡನ ಮನೆಗೆ ಸಾಗಹಾಕಲಾಗುತ್ತಿದೆ.
SHOCKING NEWS: ಕಬ್ಬಾಳು ಬೆಟ್ಟದಿಂದ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು
ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಶಿಕ್ಷ ಣ ನಿರ್ದೇಶನಾಲಯವು (ಡಿಒಇ) ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಪತ್ರ ಬರೆದು ಪರೀಕ್ಷಾ ಶುಲ್ಕವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದೆ. ಅದರಲ್ಲೂ ಮುಖ್ಯವಾಗಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ಪೂರ್ಣ ವಿನಾಯಿತಿ ನೀಡಿ ಎಂದು ಆಗ್ರಹಿಸಿದೆ.
ಸರಕಾರಿ ಶಾಲೆಗಳು, ಸರಕಾರಿ ಅನುದಾನಿತ, ದೆಹಲಿ ಪಾಲಿಕೆ ಅಡಿಯಲ್ಲಿನ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ ಉಸ್ತುವಾರಿಯ ಶಾಲೆಗಳಿಗೆ ಶುಲ್ಕ ಕಡಿತ ಅನ್ವಯವಾಗುವಂತೆ ಆದೇಶ ಹೊರಡಿಸಿ ಎಂದು ಸಿಬಿಎಸ್‌ಇಗೆ ಒತ್ತಾಯಿಸಲಾಗಿದೆ. ಈ ಬಗ್ಗೆ ಕೂಲಂಕಷ ಅಧ್ಯಯನ ನಡೆಸುತ್ತಿರುವ ಸಿಬಿಎಸ್‌ಇ ಅಧಿಕಾರಿಗಳು ಶೀಘ್ರವೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.