alex Certify ಪತ್ನಿ ಅನೈತಿಕ ಸಂಬಂಧ; ಅಕ್ಕನ ಹತ್ಯೆಗೆ ಭಾವನಿಗೆ ಸಾಥ್ ನೀಡಿದ ತಮ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಅನೈತಿಕ ಸಂಬಂಧ; ಅಕ್ಕನ ಹತ್ಯೆಗೆ ಭಾವನಿಗೆ ಸಾಥ್ ನೀಡಿದ ತಮ್ಮ

ಹಾವೇರಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಗಂಡ, ಆಕೆಯ ಸಹೋದರನೊಂದಿಗೆ ಸೇರಿ ಪತ್ನಿಯನ್ನು ಹತ್ಯೆಗೈದಿರುವ ಭೀಕರ ಘಟನೆ ಹಾವೇರಿ ಜಿಲ್ಲೆ ಕೆರೆಕೊಪ್ಪ ಗ್ರಾಮದಲ್ಲಿ ನಡೆದಿದೆ.

ಶಕುಂತಲಾ ಉಪ್ಪಾರ್ (32) ಕೊಲೆಯಾದ ಮಹಿಳೆ. 15 ವರ್ಷಗಳ ಹಿಂದೆ ಶಕುಂತಲಾ ಕೆರೆಕೊಪ್ಪ ಗ್ರಾಮದ ನಿವಾಸಿ ಹನುಮಂತಪ್ಪ ಎಂಬುವವರನ್ನು ವಿವಾಹವಾಗಿದ್ದಳು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದಾಗ್ಯೂ ಶಕುಂತಲಾ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

GOOD NEWS: ಫ್ರೆಶರ್ಸ್‌ ಗಳ ನೇಮಕಕ್ಕೆ ಮುಂದಾದ HCL

ಕೆಲ ವರ್ಷಗಳ ಹಿಂದೆ ಒಮ್ಮೆ ಪರಪುರುಷನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ತಾಯಿ ಮನೆಯವರು ಹಾಗೂ ಪೊಲೀಸರು ಬುದ್ಧಿವಾದ ಹೇಳಿ ಮತ್ತೆ ಪತಿ ಮನೆಗೆ ಸೇರಿಸಿದ್ದರು. ಆದರೆ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದಳು. ಇದರಿಂದ ಬೇಸತ್ತ ಪತಿ ಹನುಮಂತಪ್ಪ, ಶಕುಂತಲಾಳ ತಮ್ಮ ಬಸವರಾಜ್ ಜೊತೆ ಸೇರಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...