ತಮಿಳುನಾಡಿನ ವಿಲ್ಲೂಪುರಂ ಜಿಲ್ಲೆಯ ಕೋವಿಲ್ಪುರೈಯೂರ್ ನಲ್ಲಿ ಪದೇಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಪುತ್ರಿಯೇ ಕೊಲೆ ಮಾಡಿದ್ದಾಳೆ.
40 ವರ್ಷದ ವೆಂಕಟೇಶನ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ ನೀಧನದ ನಂತರ ಇಬ್ಬರು ಹೆಣ್ಣುಮಕ್ಕಳೊಂದಿಗೆ ವೆಂಕಟೇಶನ್ ವಾಸ ಮಾಡುತ್ತಿದ್ದ. ಆತನ ಹಿರಿಯ ಪುತ್ರಿ ಚೆನ್ನೈನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕಿರಿಯ ಪುತ್ರಿ ಅವಲೂರ್ ಕಾಲೇಜಿನಲ್ಲಿ 11 ನೇ ತರಗತಿ ಓದುತ್ತಿದ್ದಾಳೆ. ವೆಂಕಟೇಶನ್ ಕಿರಿಯ ಪುತ್ರಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದ ಪುತ್ರಿ ಕೊಲೆ ಮಾಡಿದ್ದಾಳೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪುತ್ರಿಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ರಕ್ಷಣೆಗಾಗಿ ಆಕೆ ಕೃತ್ಯವೆಸಗಿದ್ದರಿಂದ ಪೊಲೀಸರು ಬಿಟ್ಟು ಕಳಿಸಿದ್ದಾರೆ ಎನ್ನಲಾಗಿದೆ.