ಅಶ್ಲೀಲ ವಿಡಿಯೋ ಪ್ರಕರಣದ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಉದ್ಯಮಿ ರಾಜ್ ಕುಂದ್ರಾ ಎರಡು ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನ ಅನುಭವಿಸಿದ ಬಳಿಕ ಕೊನೆಗೂ ಜಾಮೀನಿನ ಮೂಲಕ ಹೊರ ಬಂದಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿ ರಾಜ್ ಕುಂದ್ರಾ ಮೊಬೈಲ್, ಲ್ಯಾಪ್ಟಾಪ್ ಹಾಗೂ ಹಾರ್ಡ್ ಡ್ರೈವ್ ಡಿಸ್ಕ್ನಿಂದ ಬರೋಬ್ಬರಿ 119 ಪಾರ್ನ್ ವಿಡಿಯೋಗಳನ್ನು ಪತ್ತೆ ಮಾಡಿದ್ದರು ಎನ್ನಲಾಗಿದೆ.
ಮುಂಬೈ ಕ್ರೈಂ ಬ್ರ್ಯಾಂಚ್ ವಿಭಾಗದ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಕುಂದ್ರಾ ಈ ವಿಡಿಯೋಗಳನ್ನು ಬರೋಬ್ಬರಿ 9 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವ ಪ್ಲಾನ್ ಹೊಂದಿದ್ದರು ಎಂದು ತಿಳಿದು ಬಂದಿದೆ.
ಮುಂಬೈ ಕೋರ್ಟ್ ಸೋಮವಾರ ರಾಜ್ ಕುಂದ್ರಾಗೆ 50000 ರೂಪಾಯಿ ಶ್ಯೂರಿಟಿಗೆ ಜಾಮೀನು ಮಂಜೂರು ಮಾಡಿದೆ.
ರಾಜ್ ಕುಂದ್ರಾ ಅಸೋಸಿಯೇಟ್ ರ್ಯಾನ್ ಥ್ರೋಪ್ಗೂ ಜಾಮೀನು ಮಂಜೂರಾಗಿದೆ. ಇವರಿಗೂ 50000 ರೂಪಾಯಿ ಶ್ಯೂರಿಟಿಗೆ ಜಾಮೀನು ನೀಡಲಾಗಿದೆ.
ಪ್ರಕರಣ ಸಂಬಂಧ ಮುಂಬೈ ಪೊಲೀಸರು 1500 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಶಿಲ್ಪಾ ಶೆಟ್ಟಿ ಸೇರಿದಂತೆ 43 ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ.