ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ 71ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ದೇಶದ 2.30 ಕೋಟಿ ಜನತೆಗೆ ಕೊರೊನಾ ಲಸಿಕೆ ನೀಡುವ ಮೂಲಕ ಆರೋಗ್ಯ ಸಚಿವಾಲಯ ಭರ್ಜರಿ ಉಡುಗೊರೆ ನೀಡಿದೆ. ಅಲ್ಲದೇ ದೇಶದ ವಿವಿಧ ಭಾಗಗಳಲ್ಲಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ.
ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ದೇಶ – ವಿದೇಶಗಳ ಗಣ್ಯರು ಶುಭ ಕೋರಿದ್ದು, ಬಿಜೆಪಿ ಕಾರ್ಯಕರ್ತರು ಸಹ ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಇದರ ಮಧ್ಯೆ ಕರ್ನಾಟಕದ ಕುಟುಂಬವೊಂದು ವಿಶಿಷ್ಟ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಹಾರೈಸಿದ್ದಾರೆ.
ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ನೀರ್ಣಾವಾಡಿ ಗ್ರಾಮದ ಅಂಬಿಕಾ ವೀರಶೆಟ್ಟಿ ರಂಜೇರಿ ದಂಪತಿಗೆ ಶುಕ್ರವಾರದಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದ್ದು, ಮಗುವಿಗೆ ನರೇಂದ್ರ ಎಂಬ ಹೆಸರನ್ನು ದಂಪತಿ ಇಟ್ಟಿದ್ದಾರೆ. ಪ್ರಧಾನಿ ಜನ್ಮದಿನದಂದು ಮಗು ಜನಿಸಿರುವ ಕಾರಣ ನರೇಂದ್ರ ಎಂದು ಹೆಸರಿಟ್ಟಿರುವುದಾಗಿ ತಾಯಿ ಅಂಬಿಕಾ ತಿಳಿಸಿದ್ದಾರೆ.