alex Certify ಆಗ್ರಾ – ಲಕ್ನೋ ಮಾರ್ಗದಲ್ಲಿ ವಿಮಾನಯಾನ ಸೇವೆ ಆರಂಭಿಸಲು ಮುಂದಾದ ಇಂಡಿಗೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗ್ರಾ – ಲಕ್ನೋ ಮಾರ್ಗದಲ್ಲಿ ವಿಮಾನಯಾನ ಸೇವೆ ಆರಂಭಿಸಲು ಮುಂದಾದ ಇಂಡಿಗೋ

ಅಕ್ಟೋಬರ್​ 1ರಿಂದ ಆಗ್ರಾ ಹಾಗೂ ಲಕ್ನೋ ನಡುವೆ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ. ಈ ಮೂಲಕ 4 ಗಂಟೆಗಳ ಪ್ರಯಾಣ ಅವಧಿಯನ್ನು ಕೇವಲ 1 ಗಂಟೆಯಲ್ಲಿ ಕ್ರಮಿಸಬಹುದಾಗಿದೆ.

ಅಂದಹಾಗೆ ಇಂಡಿಗೋ ಕಂಪನಿಯು ಆಗ್ರಾ ಹಾಗೂ ಲಕ್ನೋ ನಡುವೆ ವಿಮಾನಯಾನ ಸೇವೆ ಆರಂಭಿಸುತ್ತಿದೆ. ಆಗ್ರಾ ಖೇರಿಯಾ ವಿಮಾನ ನಿಲ್ದಾಣದ ನಿರ್ದೇಶಕ ಎಎ ಅನ್ಸಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಇಂಡಿಗೋ ವಿಮಾನವು ಲಕ್ನೋದ ಅಮೌಸಿ ವಿಮಾನ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 2:45ಕ್ಕೆ ಹೊರಡಲಿದೆ. ಸರಿಯಾಗಿ 1 ಗಂಟೆ ಅವಧಿಯಲ್ಲಿ ಅಂದರೆ 3:45ಕ್ಕೆ ಆಗ್ರಾವನ್ನು ತಲುಪಲಿದೆ. 15 ನಿಮಿಷ ವಿರಾಮದ ಬಳಿಕ ಲಕ್ನೋಗೆ ಸಂಜೆ 4 ಗಂಟೆಗೆ ಹೊರಡಲಿದೆ ಎಂದು ಹೇಳಿದ್ದಾರೆ.

ಆಗ್ರಾದಿಂದ ಲಕ್ನೋಗೆ ವಿಮಾನಯಾನದ ದರ 1999 ರೂಪಾಯಿ ಫ್ಲೆಕ್ಸಿ ಪ್ಲಸ್​ ದರ 2314 ರೂಪಾಯಿ ಆಗಿದೆ. ಈ ವಿಮಾನಯಾನ ಸೇವೆಯು ಆಗ್ರಾ ಹಾಗೂ ಲಕ್ನೋ ನಡುವಿನ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ಕಾನ್ಪುರದಿಂದ ಹೈದರಾಬಾದ್​, ಬೆಂಗಳೂರು, ಮುಂಬೈ, ಹಾಗೂ ದೆಹಲಿಗೆ ನೇರ ವಿಮಾನಯಾನ ಸೇವೆ ಲಭ್ಯವಿದೆ. ಲಕ್ನೋ, ವಾರಣಾಸಿ, ಪ್ರಯಾಗ್​ ರಾಜ್​, ಗೋರಖ್​ಪುರ ಹಾಗೂ ಬರೇಲಿ ಬಳಿಕ ಇದೀಗ ಕಾನ್ಪುರದಲ್ಲೂ ಲಭ್ಯವಿದೆ. ಈ ಸೇವೆಯು ಸೆಪ್ಟೆಂಬರ್​ 15ರಿಂದ ಆರಂಭವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...