ಗ್ವಾಲಿಯರ್: ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ಸೇನಾ ವಾಹನದ ಮೇಲೆ ದಾಳಿ ಮಾಡಿದ್ದಲ್ಲದೆ, ಸೈನಿಕನ ಮೇಲೆ ದುರ್ವರ್ತನೆ ತೋರಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಬಳಿ ನಡೆದಿದೆ.
ದೆಹಲಿ ಮೂಲದ 22 ವರ್ಷದ ಮಾಡೆಲ್ ಅಸಭ್ಯ ವರ್ತನೆ ತೋರಿದ್ದಾಳೆ.
ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿದ್ದಲ್ಲದೆ, ಸೇನಾ ಸಿಬ್ಬಂದಿಯನ್ನು ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಯುವತಿಯು ಸೇನಾ ವಾಹನದ ಮೇಲೆ ಕಾಲಿನಿಂದ ಒದ್ದಿದ್ದಾಳೆ. ಅಲ್ಲದೆ ತಡೆಯಲು ಬಂದ ಜವಾನನ್ನು ತಳ್ಳಿದ್ದಲ್ಲದೆ ಅಲ್ಲಿದ್ದ ಜನರಿಗೆ ಅಶ್ಲೀಲ ನಿಂದನೆಗಳನ್ನು ಮಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.
ಆಹಾ ಏನು ರುಚಿಯಂತೀರಾ ‘ಪಾಲಕ್’ ಪನ್ನೀರ್
ಇನ್ನು ಪಾಂಡವ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಇಲ್ಲದ ಕಾರಣ ಯುವತಿಯನ್ನು 30 ನಿಮಿಷ ತಡವಾಗಿ ಬಂಧಿಸಲಾಯಿತು. ದೆಹಲಿಯಿಂದ ಕಾರ್ಯಕ್ರಮಕ್ಕೆಂದು ಗ್ವಾಲಿಯರ್ ಗೆ ಬಂದ ಮಾಡೆಲ್, ಸ್ನೇಹಿತರ ಜೊತೆ ನಗರದ ಹೋಟೆಲ್ ನಲ್ಲಿ ಪಾರ್ಟಿ ಮಾಡಿದ್ದಾಳೆ. ಸ್ನೇಹಿತರ ಜೊತೆ ವಾಗ್ವಾದ ನಡೆದಿದ್ದರಿಂದ ಹೋಟೆಲ್ ನಿಂದ ಹೊರಬಂದು ರಸ್ತೆಯಲ್ಲಿ ಗಲಾಟೆ ಮಾಡಿದ್ದಾಳೆ ಎಂದು ಹೇಳಲಾಗಿದೆ.
ವೈದ್ಯಕೀಯ ವರದಿಯ ಆಧಾರದ ಮೇಲೆ ರೂಪದರ್ಶಿಯನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ, ಸೇನಾ ಸಿಬ್ಬಂದಿಯಿಂದ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.
https://twitter.com/EimKrrish/status/1436008503311695874?ref_src=twsrc%5Etfw%7Ctwcamp%5Etweetembed%7Ctwterm%5E1436008503311695874%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Findia%2Farticle%2Fviral-video-drunk-delhi-girl-caught-on-cam-kicking-army-jeep-pushing-jawan-in-mp-s-gwalior%2F810284