ಅಪ್ಘಾನಿಸ್ತಾನದಲ್ಲಿ ಪಾರುಪತ್ಯ ಸ್ಥಾಪಿಸಿರುವ ತಾಲಿಬಾನ್ ನಾಯಕರು ದಿನಕ್ಕೊಂದು ಕಾನೂನನ್ನು ಜಾರಿಗೆ ತರುತ್ತಿದ್ದಾರೆ.
ಇದೀಗ ಅಧಿಕಾರಿಗಳ ಅನುಮತಿಯನ್ನು ಪಡೆಯದೇ ಪ್ರತಿಭಟನೆ ನಡೆಸುವಂತಿಲ್ಲ ಎಂಬ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ.
ಭದ್ರತೆ ಹಾಗೂ ನ್ಯಾಯಾಂಗ ಇಲಾಖೆಯ ಅನುಮತಿ ಇಲ್ಲದೆಯೇ ಪ್ರತಿಭಟನೆ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ.
ಅಪ್ಘಾನಿಸ್ತಾನ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳ ಪ್ರಕಾರ, ಪ್ರತಿಭಟನಾಕಾರರು 24 ಗಂಟೆ ಮುಂಚಿತವಾಗಿ ಪ್ರತಿಭಟನೆ ವಿವರಗಳನ್ನು ಹಂಚಿಕೊಳ್ಳಬೇಕು.
ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆಯಾದ ಬಳಿಕ ಇದನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಿದ ಬಳಿಕ ತಾಲಿಬಾನಿಗಳು ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.
ತಾಲಿಬಾನಿಗಳ ವಿರುದ್ಧ ಫೈಜಾಬಾದ್ನಲ್ಲಿ ಪ್ರತಿಭಟನೆಗಳು ನಡೆದಿದ್ದವು. ಕಳೆದ 2 ದಶಕಗಳಲ್ಲಿ ಸಾಧಿಸಲಾದ ಪ್ರಗತಿಪರ ಬದಲಾವಣೆಗಳು ಪುನಃ ಸ್ಥಾಪನೆಯಾಗಬೇಕು. ಹಾಗೂ ನೂತನ ಸರ್ಕಾರವು ಮಹಿಳೆಯರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಆಗ್ರಹಿಸಿ ಮಹಿಳೆಯರ ಗುಂಪು ಬಾಲ್ಖ್ ಪ್ರಾಂತ್ಯದಲ್ಲಿ ಪ್ರತಿಭಟನೆ ನಡೆಸಿತ್ತು.