ದೇಶದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿ, ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ನಡುವೆ ದ್ವಿಚಕ್ರ ವಾಹನ ಸವಾರರ ಜೇಬು ಸುಡುತ್ತಿದೆ. ಈ ವೇಳೆ ಪರ್ಯಾಯ ಉಪಾಯವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಜನರು ವಾಲುತ್ತಿದ್ದಾರೆ.
ಅದರಲ್ಲೂ ನಿತ್ಯ 10-25 ಕಿ.ಮೀ ಸಂಚರಿಸುವವರಿಗೆ ಮಹಾನಗರಗಳಲ್ಲಿ ದ್ವಿಚಕ್ರ ವಾಹನಗಳೇ ಜೀವನಾಡಿಗಳು. ಅಂಥ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ ಇದೆ.
ಈಗಾಗಲೇ ಹಲವು ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿದ್ದರೂ ಒಲಾ ಕಂಪನಿಯು ಸೆ. 8ಕ್ಕೆ ಬಿಡುಗಡೆ ಮಾಡಿರುವ ‘ಎಸ್1’ ಮತ್ತು ‘ಎಸ್1 ಪ್ರೋ’ ಮೇಲೆ ದೇಶದ ಜನರ ಗಮನ ನೆಟ್ಟಿದೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಜನರು ಮುಂಗಡ ಹಣ ಪಾವತಿ ಮಾಡಿ ಸ್ಕೂಟರ್‌ಗಾಗಿ ಬುಕ್ಕಿಂಗ್ ಕೂಡ ಮಾಡಿದ್ದಾರೆ ಎನ್ನುವುದು ಗಮನಾರ್ಹ.
LPG ಸಿಲಿಂಡರ್, ತೈಲ ಬೆಲೆ ಹೆಚ್ಚಳಕ್ಕೆ ತಾಲಿಬಾನ್ ಕಾರಣ ಎಂದ ಶಾಸಕ ಅರವಿಂದ್ ಬೆಲ್ಲದ್
ಆಕರ್ಷಕ ವಿನ್ಯಾಸ, ಅತ್ಯಧಿಕ ದೂರ ಸಂಚಾರ ಸಾಮರ್ಥ್ಯ ಹೊಂದಿರುವ ಒಲಾ ಎಸ್1 ಬೆಲೆ 99,999 ರೂ. ಹಾಗೂ ಎಸ್1 ಪ್ರೊ ಬೆಲೆಯು 1.29 ಲಕ್ಷ ರೂ. ಗಳಿಂದ ಶುರುವಾಗಲಿದೆ. ಇದಕ್ಕಾಗಿ ಗ್ರಾಹಕರಿಗೆ ಬ್ಯಾಂಕ್‍ಗಳಿಂದ ವಾಹನ ಸಾಲದ ನೆರವು ಕೂಡ ಒದಗಿಸಲು ಖಾಸಗಿ ಬ್ಯಾಂಕ್‍ಗಳೊಂದಿಗೆ ಈಗಾಗಲೇ ಒಲಾ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಫೈನಾನ್ಸ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ಮೇಲೆ ಸಾಲ ನೀಡಲು ಸಿದ್ಧವಾಗಿವೆ. ಕೇವಲ 2,999 ರೂ.ನಿಂದ ಮಾಸಿಕ ಕಂತುಗಳು ಆರಂಭಗೊಳ್ಳಲಿವೆ.