ಭೋಪಾಲ್: ಸಾಮಾನ್ಯವಾಗಿ ಹಸಿರು ಬೆಂಡೆಕಾಯಿಯನ್ನು ನೋಡಿರುತ್ತೀರಿ. ಆದರೆ ಎಂದಾದರೂ ಕೆಂಪು ಬೆಂಡೆಕಾಯಿಯನ್ನು ನೋಡಿದ್ದೀರಾ..? ಹೌದು, ಮಧ್ಯಪ್ರದೇಶದ ರೈತನೊಬ್ಬ ತನ್ನ ತೋಟದಲ್ಲಿ ಕೆಂಪು ಬೆಂಡೆಕಾಯಿ ಬೆಳೆಯುತ್ತಿದ್ದಾರೆ. ಇದು ಹಸಿರು ಬೆಂಡೆಕಾಯಿಗಿಂತಲೂ ಹೆಚ್ಚು ಪೌಷ್ಠಿಕ ಎಂದು ಹೇಳಲಾಗಿದೆ.
ಭೋಪಾಲ್ ಜಿಲ್ಲೆಯ ಖಜೂರಿ ಕಲಾನ್ ಪ್ರದೇಶದ ರೈತ ಮಿಶ್ರಿಲಾಲ್ ರಜಪೂತ್, ಈ ಕೆಂಪು ಬೆಂಡೆಕಾಯಿ ಬೆಳೆಯುತ್ತಿದ್ದಾರೆ. ಜುಲೈನಲ್ಲಿ ಬೀಜ ಬಿತ್ತಿದ ಅವರು, ಕೇವಲ 40 ದಿನದಲ್ಲೇ ಬೆಳೆ ಬೆಳೆಯಲು ಪ್ರಾರಂಭಿಸಿದರು. ಈಗ ಅವರ ತೋಟದ ತುಂಬೆಲ್ಲಾ ಕೆಂಪು ಬೀಜಗಳೇ ತುಂಬಿವೆ.
ಇದು ಹಸಿರು ಬೆಂಡೆಕಾಯಿಗಿಂತ ಹೆಚ್ಚು ಪ್ರಯೋಜನಕಾರಿ ಹಾಗೂ ಪೌಷ್ಠಿಕವಾಗಿದೆ. ಹೃದಯ ಮತ್ತು ರಕ್ತದೊತ್ತಡ ಸಮಸ್ಯೆಗಳು, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಇರುವ ಜನರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ರಜಪೂತ ಹೇಳಿದ್ದಾರೆ.
ʼಗಣಪತಿʼ ಮೂರ್ತಿ ಖರೀದಿ ವೇಳೆ ಈ ವಿಷ್ಯ ನೆನಪಿರಲಿ…..!
ಇನ್ನು “ಇದರ ಮಾರುಕಟ್ಟೆ ಬೆಲೆ 250 ಗ್ರಾಂ ಅಥವಾ 500 ಗ್ರಾಂಗೆ 75-80 ರೂ.ಗಳಿಂದ 300-400 ರೂ.ಗಳವರೆಗೂ ಇರುತ್ತದೆ. ಈ ಉತ್ಪನ್ನದ ಕೃಷಿ ಸಮಯದಲ್ಲಿ ತಾನು ಯಾವುದೇ ಹಾನಿಕಾರಕ ಕೀಟನಾಶಕಗಳನ್ನು ಬಳಸಲಿಲ್ಲ” ಎಂದು ಅವರು ಹೇಳಿದ್ದಾರೆ.
ಒಂದು ಎಕರೆ ಭೂಮಿಯಲ್ಲಿ ಕನಿಷ್ಠ 40 ರಿಂದ 50 ಕ್ವಿಂಟಾಲ್ ಮತ್ತು ಗರಿಷ್ಠ 70 ರಿಂದ 80 ಕ್ವಿಂಟಾಲ್ ಬೆಳೆ ಬೆಳೆಯಬಹುದು ಎಂದು ರಜಪೂತ ತಿಳಿಸಿದ್ದಾರೆ.
ವಾರಣಾಸಿಯ ಕೃಷಿ ಸಂಶೋಧನಾ ಸಂಸ್ಥೆಯಿಂದ 1 ಕೆ.ಜಿ. ಬೀಜಗಳನ್ನು ಖರೀದಿಸಿದ್ದರಂತೆ. ಐಐವಿಆರ್, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕ್ಷೇತ್ರ ಘಟಕವಾಗಿದ್ದು, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುತ್ತದೆ.
ಸ್ನಾನ ಮಾಡುವಾಗಲೇ ಕಾದಿತ್ತು ದುರ್ವಿದಿ, ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಕಟ್ಟಿ ವೈದ್ಯಕೀಯ ವಿದ್ಯಾರ್ಥಿನಿ ಸಾವು
ಸುಮಾರು 23 ವರ್ಷಗಳ ಸಂಶೋಧನೆಯ ನಂತರ 2019ರಲ್ಲಿ ಈ ಹೊಸ ಕೆಂಪು ವಿಧದ ಓಕ್ರಾ (ಕೆಂಪು ಬೆಂಡೆಕಾಯಿ) ವನ್ನು ಅಭಿವೃದ್ಧಿಪಡಿಸಿದೆ. ಈ ಪ್ರಭೇದವನ್ನು ಅಧಿಕೃತವಾಗಿ ಕಾಶಿ ಲಲಿಮಾ ಎಂದು ಹೆಸರಿಸಲಾಗಿದೆ.
ಕಾಶಿ ಲಲಿಮಾವನ್ನು ಐಐಲಿಆರ್ ನಲ್ಲಿ ಅಭಿವೃದ್ಧಿಪಡಿಸುವ ಮೊದಲು, ಭಾರತವು ಬೇಡಿಕೆಯನ್ನು ಪೂರೈಸಲು ಪಶ್ಚಿಮದ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿತ್ತು.